ಇದು ನನ್ನ ಹಣೆಬರಹ.. ಸ್ಮಿತ್​ ಬೆನ್ನಲ್ಲೇ ಏಕದಿನ ಕ್ರಿಕೆಟ್​ಗೆ ಮುಷ್ಫಿಕರ್ ರಹೀಮ್ ಭಾವುಕ ವಿದಾಯ!​ | Retirement

dk - 2025-03-06T114747.276
Published on

Retirement :ಬಾಂಗ್ಲದೇಶ ತಂಡದ ಅನುಭವಿ, ವಿಕೇಟ್​ ಕೀಪರ್ ಮುಷ್ಫಿಕರ್ ರಹೀಮ್(mustafizur rahim)ಏಕದಿನ ಅಂತರಾಷ್ಟ್ರೀಯ ಕಿಕ್ರೆಟ್​ಗೆ ವಿದಾಯ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಬಾಂಗ್ಲಾದೇಶ ಟೀಮ್​ ಹೊರಬಿದ್ದ ಸುಮಾರು ಒಂದು ವಾರದ ನಂತರ ಈ ಘೋಷಣೆ ಹೊರಬಿದ್ದಿದೆ. ಅಲ್ಲದೆ, ಆ ಪಂದ್ಯದಲ್ಲಿ ರಹೀಮ್ ಕೂಡ ತಂಡದಲ್ಲಿದ್ದರು. ಮೂರು ಪಂದ್ಯಗಳನ್ನು ಆಡಿದ ಬಾಂಗ್ಲಾ ಟೀಮ್​, ಎರಡು ಪಂದ್ಯಗಳಲ್ಲಿ ಸೋತು, ಪಾಕಿಸ್ತಾನ ವಿರುದ್ಧದ ಅವರ ಕೊನೆಯ ಪಂದ್ಯ ರಾವಲ್ಪಿಂಡಿಯಲ್ಲಿ ಮಳೆಯಿಂದ ರದ್ದಾಗಿತ್ತು. ಹೀಗಾಗಿ, ಬಾಂಗ್ಲಾ ತನ್ನ ಗುಂಪಿನಲ್ಲಿ ಯಾವುದೇ ಗೆಲುವು ಕಂಡಿರಲಿಲ್ಲ.

ಇನ್ನು ಏಕದಿನ ನಿವೃತ್ತಿಯನ್ನು ಮುಷ್ಫಿಕರ್ ರಹೀಮ್, ತನ್ನ ಫೇಸ್​​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ವಿದಾಯದ ಬಗ್ಗೆ ಮಾತನಾಡಿರುವ ವಿಕೇಟ್​ ಕೀಪರ್​, ''ಇಂದಿನಿಂದ ನನ್ನ ಏಕದಿನ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನಮ್ಮ ಸಾಧನೆಗಳು ಜಾಗತಿಕ ಮಟ್ಟದಲ್ಲಿ ಸೀಮಿತವಾಗಿರಬಹುದು. ಆದರೆ, ಒಂದು ವಿಷಯ ನಿಶ್ಚಿತ: ನಾನು ನನ್ನ ದೇಶಕ್ಕಾಗಿ ಮೈದಾನಕ್ಕೆ ಬಂದಾಗಲೆಲ್ಲಾ, ನಾನು 100% ಕ್ಕಿಂತ ಹೆಚ್ಚು ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ನೀಡಿದ್ದೇನೆ.''

''ಕಳೆದ ಕೆಲವು ವಾರಗಳು ನನಗೆ ತುಂಬಾ ಸವಾಲಿನದ್ದಾಗಿವೆ, ಮತ್ತು ಇದು ನನ್ನ ಹಣೆಬರಹ ಎಂದು ನಾನು ಅರಿತುಕೊಂಡಿದ್ದೇನೆ'' ಎಂದು ಭಾವುಕ ವಿದಾಯ ಹೇಳಿದ್ದಾರೆ.

ಇನ್ನು ಕೊನೆಯದಾಗಿ, ಕಳೆದ 19 ವರ್ಷಗಳಿಂದ ನಾನು ಕ್ರಿಕೆಟ್​ ವೃತ್ತಿಯಲ್ಲಿದ್ದು, ಇಲ್ಲಿಯವರಿಗೆ ಸಹಕರಿಸಿದ ಕುಟುಂಬ, ಗೆಳೆಯರು ಮತ್ತು ಫ್ಯಾನ್ಸ್​ಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net