ಇದು ಆತನ ಕರಿಯರ್​ ಬೆಸ್ಟ್​; ಮರೆತು ಹೋಗಿದ್ದ ಆಟಗಾರನ ಬಗ್ಗೆ ಹರ್ಭಜನ್​ ಸಿಂಗ್ ಗುಣಗಾನ | Harbhajan

ವಿಜಯವಾಣಿ (15)
Published on

Harbhajan Singh: ನಿನ್ನೆ (ಏ.15) ಪಂಜಾಬ್​ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ ನೈಟ್​ ರೈಡರ್ಸ್​ ನಡುವಿನ ರೋಚಕ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ಪಡೆ 16 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ಐಪಿಎಲ್​ ಇತಿಹಾಸದಲ್ಲೇ ಅತ್ಯಂತ ರೋಚಕ ಜಯ ಎಂಬುದು ಗಮನಾರ್ಹ.

ಇನ್ನು ಈ ಪಂದ್ಯದಲ್ಲಿ ಪಂಜಾಬ್ ಬೌಲರ್​ಗಳು ಮಾಡಿದ ಕಮಾಲ್​ಗೆ ಮೈದಾನದಲ್ಲಿದ್ದ ಕ್ರಿಕೆಟ್​ ಅಭಿಮಾನಿಗಳು ಫಿದಾ ಆದರು. ಕಳೆದ ಪಂದ್ಯಗಳಲ್ಲಿ ಸತತ ಫ್ಲಾಪ್​ ಪ್ರದರ್ಶನ ನೀಡುತ ಎಲ್ಲರ ನೆನಪಿನಿಂದ ದೂರ ಉಳಿದಿದ್ದ ಸ್ಪಿನ್​ ಮಾಂತ್ರಿಕ ಯಜುವೇಂದ್ರ ಚಹಲ್​, ಬ್ಯಾಕ್ ಟು ಬ್ಯಾಕ್​ ಕೆಕೆಆರ್​ನ ದೈತ್ಯ ಬ್ಯಾಟರ್​ಗಳ ವಿಕೆಟ್​ ಕಬಳಿಸುವ ಮೂಲಕ ಗೆಲುವಿನ ಲಯವನ್ನು ತಮ್ಮ ತಂಡಕ್ಕೆ ತಂದರು. ಬರೋಬ್ಬರಿ 4 ವಿಕೆಟ್​ ಪಡೆದ ಚಹಲ್​, ಪ್ಲೇಯರ್​ ಆಫ್​ ದಿ ಮ್ಯಾಚ್​ ಪ್ರಶಸ್ತಿಗೆ ಭಾಜನರಾದರು.

"ಅವನ ಕರಿಯರ್​ನಲ್ಲಿ ಇದು ಅತ್ಯುತ್ತಮ ಬೌಲಿಂಗ್​. ಸಾಧಾರಣ ಗುರಿಯನ್ನು ಚೇಸ್ ಮಾಡುವ ಅವಕಾಶ ಕೆಕೆಆರ್​ಗೆ ಸಿಕ್ಕಿತು. ಆದರೆ, ವಿಫಲವಾಗಿದ್ದು ದುರಂತ. ಈ ಟೂರ್ನಿಯಲ್ಲಿ ಚಹಲ್ ಮಿಂಚಲು ತೀರ ಪರದಾಡುತ್ತಿದ್ದರು. ನಿನ್ನೆಯ ಪಂದ್ಯದಲ್ಲಿ ಉತ್ತಮ ಸ್ಪಿನ್​ ದಾಳಿಯನ್ನು ನಡೆಸಿ, ನಾಲ್ಕು ವಿಕೆಟ್​ ಕಬಳಿಸಿದ್ದಾರೆ. ಅಜಿಂಕ್ಯ ರಹಾನೆ ಅವರ ವಿಕೆಟ್​ ಪಡೆದ ಕ್ಷಣದಿಂದಲೇ ಗೆಲುವಿನ ಪತಾಕೆ ಪಂಜಾಬ್​ ಕಡೆಗೆ ವಾಲಿತು. ಚಹಲ್​ರನ್ನು ಬಹುತೇಕರು ಮರೆತುಹೋಗಿದ್ದಾರೆ. ಆದರೆ, ನಿನ್ನೆಯ ಪಂದ್ಯದಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ" ಎಂದು ಹರ್ಭಜನ್ ಸಿಂಗ್ ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net