ಇಂಜೆಕ್ಷನ್​ ಮಹಿಮೆಯಂತೆ! ತನ್ನ ಸೌಂದರ್ಯ ರಹಸ್ಯ ಕೆದಕಿದ ನೆಟ್ಟಿಗನಿಗೆ ಖುಷ್ಬೂ ಕೊಟ್ಟ ತಿರುಗೇಟು ಹೀಗಿತ್ತು... Khushbu Sundar

Khushbu Sundar
Published on

Khushbu Sundar : ವಯಸ್ಸಾದಂತೆ ಕಾಣುವುದನ್ನು ಮರೆಮಾಡಲು ಅನೇಕ ಸೆಲೆಬ್ರಿಟಿಗಳು ಪ್ರಯತ್ನಿಸುತ್ತಾರೆ. ಯಾವಾಗಲೂ ಸುಂದರವಾಗಿ ಮತ್ತು ಚಿರಯವ್ವನದಂತೆ ಕಾಣಲು ಬಯಸುತ್ತಾರೆ. ಹಿರಿಯ ಬಹುಭಾಷಾ ನಟಿ ಖುಷ್ಬೂ ಸುಂದರ್ ಕೂಡ ಅಂಥವರಲ್ಲಿ ಒಬ್ಬರು. ಸದ್ಯ ಅವರು ಮಾಡ್ರನ್​ ಡ್ರೆಸ್​ನಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಖುಷ್ಬೂ ಅವರು ತುಂಬಾ ತೆಳ್ಳಗೆ ಕಾಣುತ್ತಿದ್ದಾರೆ. ಕೇಶವಿನ್ಯಾಸ ತುಂಬಾ ಸ್ಟೈಲಿಶ್​ ಆಗಿದೆ. ತಮ್ಮ ಫೋಟೋಗೆ "ಬ್ಯಾಕ್ ಟು ದಿ ಫ್ಯೂಚರ್" ಎಂದು ಅಡಿಬರಹ ನೀಡಿದ್ದಾರೆ. ಸದ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ತರಹೇವಾರಿ ಕಾಮೆಂಟ್​ಗಳು ಹರಬಿಡುತ್ತಿದ್ದಾರೆ.

ಕೆಲವರು ಖುಷ್ಬೂ ಹೊಸ ಲುಕ್ ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಅವರು ಹೇಗೆ ಇಷ್ಟೊಂದು ತೆಳ್ಳಗಾದರು ಎಂದು ಪ್ರಶ್ನಿಸುತ್ತಿದ್ದಾರೆ. ನೀವು ಎಷ್ಟೇ ತೆಳ್ಳಗಿದ್ದರೂ ನಿಮ್ಮ ಮುಖದಲ್ಲಿ ವೃದ್ಧಾಪ್ಯದ ಲಕ್ಷಣಗಳು ಇನ್ನೂ ಕಾಣುತ್ತಿವೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ.

ಆದರೆ, ಒಬ್ಬ ವ್ಯಕ್ತಿ ಇನ್ನೂ ಮಿತಿ ಮೀರಿ, ಇಂಜೆಕ್ಷನ್‌ನಿಂದಾಗಿ ಅವರು ತುಂಬಾ ತೆಳ್ಳಗಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾನೆ. ನೀವು ನಿಮ್ಮ ಫಾಲೋವರ್ಸ್​ಗಾಗಿ ಇಂಜೆಕ್ಷನ್ ತೆಗೆದುಕೊಂಡಿದ್ದೀರಿ ಅಂತ ಹೇಳಬಹುದು! ನೀವು ಈ ರೀತಿ ಮಾಡಿದರೆ ಅವರು ಕೂಡ ಅದನ್ನೇ ಬಳಸುತ್ತಾರೆ ಎಂದು ಅವರು ಟೀಕಿಸಿದ್ದಾನೆ.

ಆ ಕಾಮೆಂಟ್​ ನೋಡಿ ಕೋಪಗೊಂಡಿರುವ ಖುಷ್ಬೂ, ನಿಮ್ಮಂತಹ ಜನರ ನೋವು ನನಗೆ ಅರ್ಥವಾಗುತ್ತಿಲ್ಲ. ನೀವು ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಮುಖವನ್ನು ಸಹ ತೋರಿಸುವುದಿಲ್ಲ. ಏಕೆಂದರೆ ನೀವು ಎಷ್ಟು ದಡ್ಡರು ಎಂದು ನಿಮಗೆ ತಿಳಿದಿದೆ! ಇದು ನಾಚಿಕೆಗೇಡಿನ ಸಂಗತಿ. ನಿಮ್ಮ ಹೆತ್ತವರ ಬಗ್ಗೆ ಯೋಚಿಸಿದಾಗ ನಿಜಕ್ಕೂ ಅಯ್ಯೋ ಎನಿಸುತ್ತದೆ ಎಂದು ಎಕ್ಸ್​ ಖಾತೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಹಲವು ಚಲನಚಿತ್ರಗಳನ್ನು ಮಾಡಿರುವ ಖುಷ್ಬೂ ಕೊನೆಯದಾಗಿ ವನವಾಸ್ ಚಿತ್ರದಲ್ಲಿ ಕಾಣಿಸಿಕೊಂಡರು. ಅವರು ಪ್ರಸ್ತುತ ತಮಿಳಿನಲ್ಲಿ ಧಾರಾವಾಹಿ ಮಾಡುತ್ತಿದ್ದಾರೆ. ಅವರು ಹಾಸ್ಯ ಕಾರ್ಯಕ್ರಮವೊಂದರಲ್ಲಿ ಜಡ್ಜ್​ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net