

Virat Kohli : ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ದಾಖಲೆಗಳ ಸರದಾರ, ಅಭಿಮಾನಿಗಳ ಕಿಂಗ್ ಮತ್ತು ದಿಗ್ಗಜ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ನಿನ್ನೆ (ಆಗಸ್ಟ್ 18) ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 17 ವರ್ಷಗಳನ್ನು ಪೂರೈಸಿದ್ದಾರೆ. 2008ರಲ್ಲಿ ಆಗಸ್ಟ್ 18ರಂದು ಕೊಹ್ಲಿ, ಟೀಮ್ ಇಂಡಿಯಾ ಪರ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ವಿರಾಟ್ ಏನು ಮಾಡಿದ್ದಾರೆಂದು ಇಡೀ ಜಗತ್ತು ನೋಡಿದೆ.
17 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಶತಕಗಳ ಮೇಲೆ ಶತಕಗಳನ್ನು ಗಳಿಸುತ್ತಾ, ರನ್ ಮಳೆ ಹರಿಸುತ್ತಾ ಬಂದಿರುವ ವಿರಾಟ್, ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅಲ್ಲದೆ, ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ವಿರಾಟ್ ಸಾಧಿಸಿದ ಬೃಹತ್ ದಾಖಲೆಗಳನ್ನು ನೋಡೋಣ.
* ಎಲ್ಲಾ ಸ್ವರೂಪಗಳಲ್ಲಿ 550 ಪಂದ್ಯಗಳನ್ನು ಆಡಿರುವ ವಿರಾಟ್, 52.27 ಸರಾಸರಿಯಲ್ಲಿ 27,599 ರನ್ ಗಳಿಸಿದ್ದಾರೆ. ಇದರಲ್ಲಿ 82 ಶತಕಗಳು ಮತ್ತು 143 ಅರ್ಧಶತಕಗಳಿವೆ.
* ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ (34357) ಮತ್ತು ಸಂಗಕ್ಕಾರ (28016) ನಂತರ ಮೂರನೇ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ.
* ಸಚಿನ್ (100) ನಂತರ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ
* ಒಂದು ದಶಕದಲ್ಲಿ 20,000ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ
* ಸಚಿನ್ ತೆಂಡೂಲ್ಕರ್ (76) ನಂತರ ಅತಿ ಹೆಚ್ಚು ಪಂದ್ಯ ಪುರುಷೋತ್ತಮ ಪ್ರಶಸ್ತಿಗಳನ್ನು (69) ಪಡೆದ ಆಟಗಾರ ಇವರು
* ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು (21) ಅತಿ ಗಳಿಸಿದ ಆಟಗಾರ
* ಅತಿ ಹೆಚ್ಚು ಐಸಿಸಿ ಪ್ರಶಸ್ತಿಗಳನ್ನು (10) ಪಡೆದ ಆಟಗಾರ
* ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ (51) ಬಾರಿಸಿದ ಆಟಗಾರ
* ಏಕದಿನ ಪಂದ್ಯಗಳಲ್ಲಿ 8000-14000 ರನ್ ಗಳಿಸಿದ ವೇಗದ ಆಟಗಾರ
* ಏಕದಿನ ಪಂದ್ಯಗಳಲ್ಲಿ ಒಂದು ತಂಡದ (ಶ್ರೀಲಂಕಾ) ವಿರುದ್ಧ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ
* ಏಕದಿನ ಪಂದ್ಯಗಳಲ್ಲಿ ಮೂರು ದೇಶಗಳ (ಶ್ರೀಲಂಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ) ವಿರುದ್ಧ 8+ ಶತಕ ಬಾರಿಸಿದ ಏಕೈಕ ಆಟಗಾರ
* ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕ (39) ಬಾರಿಸಿದ ಆಟಗಾರ
* ಟಿ20 ಪಂದ್ಯಗಳಲ್ಲಿ ಅತ್ಯಧಿಕ ಸರಾಸರಿ (48.70) ಹೊಂದಿರುವ ಆಟಗಾರ
* ICC ಶ್ರೇಯಾಂಕದಲ್ಲಿ ಮೂರು ಸ್ವರೂಪಗಳಲ್ಲಿ ನಂಬರ್ ಒನ್ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ
* ನಾಯಕನಾಗಿ ಅತಿ ಹೆಚ್ಚು ದ್ವಿಶತಕ (7) ಬಾರಿಸಿದ ಆಟಗಾರ
* 25 ಟೆಸ್ಟ್ ಶತಕಗಳನ್ನು ಗಳಿಸಿದ ವೇಗದ ಭಾರತೀಯ ಆಟಗಾರ
* ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ (68 ಪಂದ್ಯಗಳಲ್ಲಿ 40 ಗೆಲುವುಗಳು)
ಕಳೆದ ವರ್ಷ ಟಿ20 ಮಾದರಿಯಿಂದ ನಿವೃತ್ತಿ ಘೋಷಿಸಿದ್ದ ವಿರಾಟ್, ಈ ವರ್ಷ ಟೆಸ್ಟ್ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದರೂ, ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ಮಾತ್ರ ಮುಂದುವರೆದಿದ್ದಾರೆ. (ಏಜೆನ್ಸೀಸ್)