Race: ಟಿವಿಎಸ್​ ರಾಷ್ಟ್ರೀಯ ಚಾಂಪಿಯನ್​ಷಿಪ್​ನಲ್ಲಿ ರಾಜ್ಯದ ಹರ್ಷಿತ್​ಗೆ ಪ್ರಶಸ್ತಿ

web race
Published on

ಬೆಂಗಳೂರು: ಚೆನ್ನೈನ ಶ್ರೀಪೆರುಂಬುದೂರ್​ನಲ್ಲಿರುವ ಮದ್ರಾಸ್​ ಇಂಟರ್​ನ್ಯಾಷನಲ್​ ಸಕ್ಯೂರ್ಟ್​ನಲ್ಲಿ ಇತ್ತೀಚೆಗೆ ನಡೆದ ಟಿವಿಎಸ್​ ಒಎಂಸಿ ರಾಷ್ಟ್ರೀಯ ಮೋಟಾರು ಬೈಕ್​ ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕದ ಹರ್ಷಿತ್​ ವಿ. ಬೋಗರ್​ ಚಾಂಪಿಯನ್​ ಆಗಿ ಹೊರಹೊಮ್ಮಿದರು.

ಅವರು 6 ರೇಸ್​ಗಳಲ್ಲಿ ಗೆಲುವು ಸಾಧಿಸಿದರೆ, 2 ರೇಸ್​ಗಳಲ್ಲಿ ರನ್ನರ್​ಅಪ್​ ಎನಿಸಿದರು. ಇನ್ನೊಂದು ರೇಸ್​ನಲ್ಲಿ 2ನೇ ರನ್ನರ್​ಅಪ್​ ಸ್ಥಾನ ಪಡೆದರು. ಒಟ್ಟಾರೆಯಾಗಿ 40 ಅಂಕಗಳ ಮುನ್ನಡೆಯೊಂದಿಗೆ ಅವರು ಪ್ರಶಸ್ತಿ ಗೆದ್ದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net