ಟೋಕಿಯೋ ಒಲಿಂಪಿಕ್ಸ್​​ನಿಂದ ಹೊರಬಿದ್ದ ವಿಶ್ಚ ನಂ.1 ಟೆನ್ನಿಸ್ ಆಟಗಾರ

joaookok
Published on

ಟೋಕಿಯೋ: ವಿಶ್ವ ನಂ. 01 ಶ್ರೇಯಾಂಕಿತ ಸೆರೀಬಿಯನ್ ಟೆನ್ನಿಸ್ ಆಟಗಾರ ನೊವಾಕ್ ಜೊಕೋವಿಕ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.

ಇಂದು ನಡೆದ ಪುರುಷರ ಸಿಂಗಲ್ಸ್​ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ, ಜರ್ಮನಿಯ ಅಲೆಗ್ಸಾಂಡರ್ ಜ್ವೆರ್ವ್ ವಿರುದ್ದ 1-6, 6-3, 6-1 ಅಂತರದಲ್ಲಿ ಸೋಲುವ ಮೂಲಕ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.

ಈ ಪಂದ್ಯದಲ್ಲಿ ಸೋಲುವ ಮೂಲಕ ಜೊಕೋವಿಕ್ ಗೋಲ್ಡನ್ ಸ್ಲ್ಯಾಮ್ (ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಮತ್ತು ಒಲಿಂಪಿಕ್ಸ್ ಪದಕ) ಸಾಧನೆ ಮಾಡುವಲ್ಲಿ ವಿಫಲರಾಗಿದ್ದಾರೆ. ಜೊಕೋವಿಕ್ ಮೊದಲ ಸೆಟ್​​ನಲ್ಲಿ ಮುನ್ನಡೆ ಸಾಧಿಸಿದರೂ, ಉಳಿದ ಎರಡು ಸೆಟ್ ಸೋಲುವ ಮೂಲಕ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net