ಕ್ಯಾಸಿನೊ ವಿರುದ್ಧ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕಾನೂನು ಸಮರ; ಕಾರಣವೇನು ಗೊತ್ತೇ?

sachin web
Published on

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕಾಗಿ ತಮ್ಮ ಚಿತ್ರವನ್ನು ತಿರುಚಿ ಬಳಸಿಕೊಂಡಿರುವ ಕ್ಯಾಸಿನೊ ಒಂದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮುಂದಾಗಿದ್ದಾರೆ. ಸಚಿನ್ ಅನುಮತಿ ಇಲ್ಲದೆ ಅವರ ಚಿತ್ರವನ್ನು ಬಳಸಿರುವ ಗೋವಾದ ‘ಬಿಗ್ ಡ್ಯಾಡಿ’ ಕ್ಯಾಸಿನೊ ಎನ್ನಲಾಗಿದೆ.

ಕ್ಯಾಸಿನೊದಂಥ ಜೂಜು ಮಾತ್ರವಲ್ಲದೆ ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳಿಗೂ ತಾನೆಂದೂ ಪ್ರಚಾರ ಮಾಡುವುದಿಲ್ಲ ಎಂಬುದನ್ನೂ ಸಚಿನ್ ತೆಂಡುಲ್ಕರ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

‘ನನ್ನ ತಂಡ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಇದೇ ವೇಳೆ ನಾನು ಅತ್ಯಂತ ಮಹತ್ವದ ಅಂಶವೊಂದನ್ನು ಎಲ್ಲರಿಗೂ ಸ್ಪಷ್ಟಪಡಿಸಲು ಬಯಸಿರುವೆ. ನನ್ನ ಮುಖದ ಮಾರ್ ಚಿತ್ರವನ್ನು ಬಳಸಿ ನಾನು ಕ್ಯಾಸಿನೊ ಬಗ್ಗೆ ಪ್ರಚಾರ ಮಾಡುತ್ತಿರುವಂತೆ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಪ್ರಕಟಿಸಲಾಗುತ್ತಿದೆ. ಆದರೆ ನಾನೆಂದೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ಜೂಜು, ಟೊಬ್ಯಾಕೊ ಅಥವಾ ಆಲ್ಕೋಹಾಲ್ ಕುರಿತು ಪ್ರಚಾರ ಮಾಡುವುದಿಲ್ಲ. ಜನರ ದಾರಿ ತಪ್ಪಿಸಲು ನನ್ನ ಚಿತ್ರ ಬಳಕೆಯಾಗುತ್ತಿರುವುದು ಬೇಸರ ತಂದಿದೆ’ ಎಂದು 48 ವರ್ಷದ ಸಚಿನ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net