VIDEO| ಕೈಗಳಿಲ್ಲದ ಕ್ರಿಕೆಟಿಗನನ್ನು ಭೇಟಿಯಾಗಿ ಬ್ಯಾಟ್​ ಗಿಫ್ಟ್​ ನೀಡಿದ ಸಚಿನ್​ ತೆಂಡುಲ್ಕರ್​

sachin web
Published on

ಶ್ರೀನಗರ: ಎರಡೂ ಕೈಗಳಿಲ್ಲದಿದ್ದರೂ ಭುಜ ಮತ್ತು ಕುತ್ತಿಗೆಯ ನಡುವೆ ಬ್ಯಾಟ್​ ಹಿಡಿದು ಆಡುವ ಮೂಲಕ ಕ್ರಿಕೆಟ್​ ಪ್ರೇಮಿಗಳ ಮನಗೆದ್ದಿರುವ ಕಾಶ್ಮೀರದ ಪ್ಯಾರಾ ಕ್ರಿಕೆಟಿಗ ಆಮೀರ್​ ಹೊಸೈನ್​ ಅವರನ್ನು ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಮತ್ತು ತನ್ನ ಹಸ್ತಾಕ್ಷರವಿರುವ ಬ್ಯಾಟ್​ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪ್ರಪ್ರಥಮ ಬಾರಿಗೆ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿರುವ ಸಚಿನ್​, 7ನೇ ವಯಸ್ಸಿನಲ್ಲೇ ಅಪಘಾತದಲ್ಲಿ ಕೈಗಳನ್ನು ಕಳೆದುಕೊಂಡಿರುವ ಅನಂತ್​ನಾಗ್​ನ ಆಮೀರ್​ ಜೀವನೋತ್ಸಾಹ ಮತ್ತು ಕ್ರಿಕೆಟ್​ ಪ್ರೀತಿಯನ್ನು ಶ್ಲಾಘಿಸಿದ್ದಾರೆ. ತಮ್ಮ ಭೇಟಿಯ ವಿಡಿಯೋವನ್ನು ಸಚಿನ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

34 ವರ್ಷದ ಆಮೀರ್​ ಬ್ಯಾಟಿಂಗ್​ ವಿಡಿಯೋ ಈ ಮುನ್ನ ವೈರಲ್​ ಆದಾಗ, ಸಚಿನ್​ ಕೂಡ ಅದನ್ನು ಹಂಚಿಕೊಂಡು ಮೆಚ್ಚುಗೆ ಸೂಚಿಸಿದ್ದರು ಮತ್ತು ಮುಂದೊಂದು ದಿನ ಆಮೀರ್​ರನ್ನು ಭೇಟಿಯಾಗುವುದಾಗಿಯೂ ಹೇಳಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net