ಐದನೇ ಟೆಸ್ಟ್​ ಪಂದ್ಯದಲ್ಲಿ ರೋಚಕ ಗೆಲುವು; ಸರಣಿ ಸಮಬಲ ಸಾಧಿಸಿದ ಭಾರತ | IND vs ENG

ವಿಜಯವಾಣಿ - 2025-08-04T161419.551
Published on

IND vs ENG: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಯನ್ನು ಕಡೆಗೂ ಸಮಬಲಗೊಳಿಸುವಲ್ಲಿ ಭಾರತ ಯಶಸ್ವಿಯಾಯಿತು.

ಲಂಡನ್​​ನ ಕೆನ್ನಿಂಗ್ಟನ್ ಓವಲ್​ನಲ್ಲಿ ನಡೆದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್​ ಕ್ಲೈಮ್ಯಾಕ್ಸ್​ ಹಂತವನ್ನು ತಲುಪಿತ್ತು. ಇಂಗ್ಲೆಂಡ್​ಗೆ 35 ರನ್​ಗಳ ಅಗತ್ಯವಿದ್ದರೆ, ಟೀಮ್ ಇಂಡಿಯಾಗೆ 4 ವಿಕೆಟ್​ಗಳು ಬೇಕಿತ್ತು. ಮೂರು ವಿಕೆಟ್​ಗಳನ್ನು ಯಶಸ್ವಿಯಾಗಿ ಕಬಳಿಸಿದ ಗಿಲ್ ಪಡೆಗೆ ಅಚ್ಚರಿ ಮೂಡಿಸಿದ್ದು, ಕ್ರಿಸ್​ ವೋಕ್ಸ್​ ಎಂಟ್ರಿ!

ಕಡೆಯ ದಿನದಾಟದಲ್ಲಿ ಇಂಗ್ಲೆಂಡ್​ನ 4 ವಿಕೆಟ್​ಗಳನ್ನು ಕಬಳಿಸುವಲ್ಲಿ ಗಿಲ್ ಪಡೆ ಮೇಲುಗೈ ಸಾಧಿಸಿತು. ಪ್ರಸಿದ್ಧ್ ಕೃಷ್ಣ  ಮತ್ತು ಮೊಹಮ್ಮದ್​ ಸಿರಾಜ್ ತಲಾ ಎರಡು ವಿಕೆಟ್​ ಪಡೆದರು. ಈ ವೇಳೆ ಕೊನೆಗೆ ಕಣಕ್ಕಿಳಿದ ಇಂಜುರಿಯಿಂದ ಬಳಲುತ್ತಿದ್ದ ಕ್ರಿಸ್​ ವೋಕ್ಸ್​, ಒಂದೇ ಕೈಯಲ್ಲಿ ತಂಡದ ಪರ ಆಡಿದರು. ಆದರೆ, ಗೆಲುವು ತಂದುಕೊಡುವಲ್ಲಿ ವಿಫಲರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net