ಆಗಸ್ಟ್​ನಲ್ಲಿ ಬಾಂಗ್ಲಾ ಪ್ರವಾಸಕ್ಕೆ ಟೀಮ್​ ಇಂಡಿಯಾ; ವೇಳಾಪಟ್ಟಿ ಪ್ರಕಟ...

web ind vs ban
Published on

ಢಾಕಾ: ಭಾರತ ತಂಡ ವೈಟ್​ಬಾಲ್​ ಕ್ರಿಕೆಟ್​ ಸರಣಿಗಾಗಿ ಮುಂದಿನ ಆಗಸ್ಟ್​ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಮೀರ್ಪುರ ಮತ್ತು ಚಟ್ಟೋಗ್ರಾಮ್​ನಲ್ಲಿ ಭಾರತ ತಂಡ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದ್ದು, ಸರಣಿಯ ವೇಳಾಪಟ್ಟಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ (ಬಿಸಿಬಿ) ಮಂಗಳವಾರ ಪ್ರಕಟಿಸಿದೆ.

ಭಾರತ ತಂಡ ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ದ್ವಿಪಕ್ಷೀಯ ಟಿ20 ಸರಣಿಯೊಂದನ್ನು ಆಡಲಿದೆ. ಜತೆಗೆ 2014ರ ಬಳಿಕ ಮೊದಲ ಬಾರಿಗೆ ವೈಟ್​ಬಾಲ್​ ಪಂದ್ಯಗಳಿಗಾಗಿ ಮಾತ್ರ ಬಾಂಗ್ಲಾಕ್ಕೆ ತೆರಳಲಿದೆ. ಏಷ್ಯಾಕಪ್​ ಟಿ20 ಟೂರ್ನಿಯ ಸಿದ್ಧತೆಗೆ ಈ ಪ್ರವಾಸ ನೆರವಾಗಲಿದೆ.

ಆಗಸ್ಟ್​ 17, 20ರಂದು ಮೀರ್ಪುರದಲ್ಲಿ 2 ಏಕದಿನ ಪಂದ್ಯಗಳು ನಡೆದರೆ, ಕೊನೇ ಏಕದಿನ ಪಂದ್ಯ ಆಗಸ್ಟ್​ 23ರಂದು ಚಟ್ಟೋಗ್ರಾಮ್​ನಲ್ಲಿ ನಡೆಯಲಿದೆ. ಆಗಸ್ಟ್​ 26 ರಂದು ಮೊದಲ ಟಿ20 ಪಂದ್ಯವೂ ಚಟ್ಟೋಗ್ರಾಮ್​ನಲ್ಲಿ ನಡೆದರೆ, ಆಗಸ್ಟ್​ 29 ಮತ್ತು 31ರಂದು ಕೊನೇ 2 ಟಿ20 ಪಂದ್ಯಗಳು ಮೀರ್ಪುರದಲ್ಲಿ ನಡೆಯಲಿವೆ. ಉಭಯ ದೇಶಗಳ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಈ ಸರಣಿ ಆಯೋಜನೆಯಾಗಿರುವುದು ಕುತೂಹಲಕಾರಿ ಎನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net