ಏಷ್ಯಾದ ಹೊರಗಡೆ ಈತನದ್ದು... Team India ಸ್ಟಾರ್​ ಬ್ಯಾಟರ್​ನ ಪ್ರದರ್ಶನಕ್ಕೆ ಕಿಡಿಕಾರಿದ ಮಾಜಿ ಆಟಗಾರ

Team India
Published on

ನವದೆಹಲಿ: ಹಾಲಿ ನಡೆಯುತ್ತಿರುವ ಬಾರ್ಡರ್​-ಗವಾಸ್ಕರ್​ ಟ್ರೋಫಿ (Border Gavaskar Trophy) ಟೆಸ್ಟ್​ ಸರಣಿಯಲ್ಲಿ ಮೊದಲ ಪಂದ್ಯ ಹೊರತುಪಡಿಸಿದರೆ ಉಳಿದ ಮ್ಯಾಚ್​ಗಳಲ್ಲಿ ಭಾರತ ತಂಡ (Team India) ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಪ್ರಮುಖವಾಗಿ ಬ್ಯಾಟ್ಸ್​ಮನ್​ಗಳು ಉಪಯುಕ್ತ ಆಟವಾಡದೆ ಇರುವುದು ತಂಡದ ಮ್ಯಾನೇಜ್​ಮೆಂಟ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಟೆಸ್ಟ್​ ಕ್ರಿಕೆಟ್​ ತಜ್ಞ ಆಟಗಾರರಾದ ಚೇತೇಶ್ವರ್ ಪೂಜಾರಾ ಹಾಗೂ ಅಜಿಂಕ್ಯ ರಹಾನೆ ಅವರನ್ನು ತಂಡಕ್ಕೆ ವಾಪಸ್​ ಕರೆತರುವಂತೆ ಕ್ರೀಡಾ ಪಂಡಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವ ನಡುವೆಯೇ ಟೀಮ್​ ಇಂಡಿಯಾ (Team India) ಆಟಗಾರನ ಕುರಿತು ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ (Aakash Chopra) ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಆರಂಭಿಕ ಶುಭಮನ್​ ಗಿಲ್​ (Shubman Gill) ಪ್ರದರ್ಶನ ಕುರಿತು ಮಾತನಾಡಿರುವ ಆಕಾಶ್​ ಚೋಪ್ರಾ (Aakash Chopra), ಶುಭಮನ್​ ಗಿಲ್​ ಪ್ರದರ್ಶನದ ಬಗ್ಗೆ ನಾವು ಮುಖ್ಯವಾಗಿ ಮಾತನಾಡಬೇಕಿದೆ. ಆತ ಏಷ್ಯಾದ ಹೊರಗಡೆ 16 ಇನ್ನಿಂಗ್ಸ್​ನಲ್ಲಿ 40ಕ್ಕೂ ಅಧಿಕ ರನ್​ ಬಾರಿಸಿಲ್ಲ. ಈತ ಒಂದಂಕಿ ಮೊತ್ತ ದಾಟಿಲ್ಲ. ಹೀಗಿದ್ದಾಗ ನಿಮ್ಮ ಪ್ರದರ್ಶನ ಹಾಗೂ ಸ್ಥಿರತೆ ಬಗ್ಗೆ ಮುಖ್ಯವಾಗಿ ಮಾತನಾಡಬೇಕಿದೆ.

Shubman Gill

ಕಳೆದ ಕೆಲವು ಪಂದ್ಯಗಳಲ್ಲಿ ಆತ ಉತ್ತಮವಾಗಿ ಆಡಿದನಾದರೂ ಇದು ಈತ ಮಾತ್ರವಲ್ಲದೇ ಉಳಿದವರ ಸಮಸ್ಯೆ ಕೂಡ ಅದೇ ಆಗಿದೆ. ಹೀಗಿರುವಾಗ ಶುಭಮನ್​ ಗಿಲ್​​ ಸೇರಿದಂತೆ ಎಲ್ಲರೂ ತಮ್ಮ ಪ್ರದರ್ಶನದ ಬಗ್ಗೆ ಗಮನ ಹರಿಸಬೇಕಿದೆ ಎಂದು ಟೀಮ್​ ಇಂಡಿಯಾದ ಮಾಜಿ ಆಟಗಾರ ಆಕಾಶ್​ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar)​ ಟೆಸ್ಟ್​ ಸರಣಿಯೂ ನವೆಂಬರ್​ 22ಕ್ಕೆ ಆರಂಭವಾಗಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net