ಬೆಂಗಳೂರಿನಿಂದ ಹರಿಣಗಳ ನಾಡಿಗೆ ಹಾರಿದ ಸೂರ್ಯಕುಮಾರ್​ ಪಡೆ

surya web
Published on

ಬೆಂಗಳೂರು: ಸೂರ್ಯಕುಮಾರ್​ ಯಾದವ್​ ಸಾರಥ್ಯದ ಭಾರತದ ಟಿ20 ತಂಡದ ಆಟಗಾರರು ದಣ ಆಫ್ರಿಕಾ ಪ್ರವಾಸಕ್ಕೆ ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ವಿಮಾನ ಏರಿದರು.

ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಜತೆಗೆ ತಂಡದ ಪ್ರಮುಖ ಆಟಗಾರರಾದ ಶ್ರೇಯಸ್​ ಅಯ್ಯರ್​, ಋತುರಾಜ್​ ಗಾಯಕ್ವಾಡ್​, ಮೊಹಮದ್​ ಸಿರಾಜ್​, ಯಶಸ್ವಿ ಜೈಸ್ವಾಲ್​ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಣ ಆಫ್ರಿಕಾಕ್ಕೆ ಪ್ರಯಾಣಿಸಿದರು. ಪ್ರವಾಸದ ಆರಂಭದಲ್ಲಿ ಭಾರತ ತಂಡ 3 ಪಂದ್ಯಗಳ ಟಿ20 ಸರಣಿ ಆಡಲಿದ್ದು, ಭಾನುವಾರ ಡರ್ಬನ್​ನಲ್ಲಿ ಮೊದಲ ಪಂದ್ಯ ನಡೆಯಲಿದೆ.

ಡಿಸೆಂಬರ್​ 17ರಿಂದ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಅದರಲ್ಲಿ ಕನ್ನಡಿಗ ಕೆಎಲ್​ ರಾಹುಲ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಬಳಿಕ ಡಿಸೆಂಬರ್​ 26ರಿಂದ ನಡೆಯಲಿರುವ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ರೋಹಿತ್​ ಶರ್ಮ ನಾಯಕತ್ವ ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net