ಐಪಿಎಲ್​ಗೆ ಇನ್ನೂ 5 ವರ್ಷ ಟಾಟಾ ಗ್ರೂಪ್​ ಪ್ರಾಯೋಜಕತ್ವ?

ipl tata web
Published on

ನವದೆಹಲಿ: ಐಪಿಎಲ್​ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಟಾಟಾ ಗ್ರೂಪ್​ ಇನ್ನೂ 5 ವರ್ಷಗಳ ಕಾಲ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ.

ಟಾಟಾ ಸನ್ಸ್​ ಮತ್ತು ಆದಿತ್ಯ ಬಿರ್ಲಾ ಗ್ರೂಪ್​ ಕಂಪನಿಗಳು ತಲಾ ವಾರ್ಷಿಕ 500 ಕೋಟಿ ರೂ.ನಂತೆ ಒಟ್ಟಾರೆ 2,500 ಕೋಟಿ ರೂ. ಬಿಡ್​ ಸಲ್ಲಿಸಿವೆ. ಆದರೆ ಹಾಲಿ ಒಪ್ಪಂದ ಹೊಂದಿರುವ ಕಾರಣಕ್ಕೆ ಬಿಸಿಸಿಐ, ಟಾಟಾಗೆ ಆದ್ಯತೆ ನೀಡಿದೆ ಎನ್ನಲಾಗಿದೆ.

ಟಾಟಾ ಗ್ರೂಪ್​ ಕಳೆದೆರಡು ವರ್ಷಗಳಿಗೆ 335 ಕೋಟಿ ರೂ.ನಂತೆ 670 ಕೋಟಿ ರೂ. ಒಪ್ಪಂದ ಹೊಂದಿತ್ತು. ಈ ಬಾರಿ ಬಿಸಿಸಿಐ ವಾರ್ಷಿಕ 350 ಕೋಟಿ ರೂ.ಗಳ ಕನಿಷ್ಠ ಬಿಡ್​ ನಿಗದಿಪಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net