

ಡರ್ಬನ್: ಹರಿಣಗಳ ನಾಡಿನಲ್ಲಿ ಶುಕ್ರವಾರದಿಂದ 19 ವಯೋಮಿತಿಯ ಏಕದಿನ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈಗಾಗಲೆ ಸದ್ದು ಮಾಡಿರುವ ಕೆಲ ಆಟಗಾರರ ಸಂಬಂಧಿಕರು ಈ ಸಲದ ಕಿರಿಯರ ವಿಶ್ವಕಪ್ನಲ್ಲಿ ಆಡುತ್ತಿರುವುದು ವಿಶೇಷವಾಗಿದೆ.
ಆಲ್ರೌಂಡರ್ ಮೊಹಮದ್ ನಬಿ ಪುತ್ರ ಹಸನ್ ಇಸಖಿಲ್ ಮತ್ತು ಸ್ಪಿನ್ನರ್ ರಶೀದ್ ಖಾನ್ ಸೋದರಳಿಯ ಉಸ್ಮಾನ್ ಶಿನ್ವಾರಿ ಅಫ್ಘಾನಿಸ್ತಾನ ಕಿರಿಯರ ತಂಡದಲ್ಲಿ ಆರಂಭಿಕ ಜೋಡಿಯಾಗಿದ್ದಾರೆ.
ಇನ್ನು ಭಾರತ ತಂಡದಲ್ಲಿ 2016ರ ಕಿರಿಯರ ವಿಶ್ವಕಪ್ನಲ್ಲಿ ಮಿಂಚಿದ್ದ ಸ್ರಾರ್ಜ್ ಖಾನ್ ಕಿರಿಯ ಸಹೋದರ ಮುಶೀರ್ ಖಾನ್ ಸ್ಥಾನ ಪಡೆದಿದ್ದಾರೆ. ಪಾಕ್ ತಂಡದಲ್ಲಿ ವೇಗಿ ನಸೀಮ್ ಷಾ ಸಹೋದರ ಉಬೇದ್ ಷಾ ಇದ್ದಾರೆ. ಮಾಜಿ ಟೆಸ್ಟ್ ನಾಯಕ ಜೆರೆಮಿ ಕಾನಿ ಮೊಮ್ಮಗ ಟಾಮ್ ಜೋನ್ಸ್ ಕಿವೀಸ್ ಕಿರಿಯರ ತಂಡದಲ್ಲಿದ್ದಾರೆ.