ಇನ್ಮುಂದೆ ಪಾಕ್​ ಡ್ರೆಸ್ಸಿಂಗ್​ ರೂಮ್​ನಲ್ಲಿ Team India ಬಗ್ಗೆ ಮಾತನಾಡುವಂತಿಲ್ಲ​; ಹೀಗಿದೆ ಕಾರಣ

India Pakistan
Published on

ನವದೆಹಲಿ: ಇದೇ ಅಕ್ಟೋಬರ್​ 18ರಿಂದ ಆರಂಭವಾಗಲಿರುವ ಎಮರ್ಜಿಂಗ್​ ಏಷ್ಯಾಕಪ್​ (Emerging AsiaCup) ಟೂರ್ನಿಗೆ ಓಮನ್​ (Oman) ಆತಿಥ್ಯ ವಹಿಸುತ್ತಿದ್ದು, ಎಲ್ಲಾ ತಂಡಗಳು ಟೂರ್ನಿಗೆ ಸಜ್ಜಾಗಿವೆ. ಭಾರತ (Team India), ಪಾಕ್​ (Pakistan) ಸೇರಿದಂತೆ ಏಷ್ಯನ್ ರಾಷ್ಟ್ರಗಳು (Asian Countries) ಟೂರ್ನಿಯಲ್ಲಿ ಭಾಗಿಯಾಗುತ್ತಿದ್ದು, ಅಕ್ಟೋಬರ್ 19 ರಂದು ನಡೆಯಲ್ಲಿರುವ ಭಾರತ (Team India) ಹಾಗೂ ಪಾಕಿಸ್ತಾನ (Pakistan) ನಡುವಿನ ಹೈವೋಲ್ಟೇಜ್​ ಕದನಕ್ಕೆ ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಟೀಮ್​ ಇಂಡಿಯಾ (Team India) ಕುರಿತಾಗಿ ತೆಗೆದುಕೊಂಡಿರುವ ನಿರ್ಣಯವೊಂದು ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದು, ಭಾರತೀಯ (Team India) ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ.

ಟೂರ್ನಿ ಆರಂಭಕ್ಕೂ ಮುನ್ನ ಸಾಮಾನ್ಯವಾಗಿ ಆಯಾ ತಂಡಗಳ ನಾಯಕರು ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡುತ್ತಾರೆ. ಅದೇ ರೀತಿ ಪಾಕಿಸ್ತಾನ ಕ್ರಿಕೆಟ್​ ತಂಡದ (Pakistan Cricket Team) ನಾಯಕ ಮೊಹಮ್ಮದ್​ ಹ್ಯಾರಿಸ್​ (Mohammed Haris) ಕೂಡ ಮಾತನಾಡಿದ್ದು, ಈ ವೇಳೆ ತಮ್ಮ ಡ್ರೆಸ್ಸಿಂಗ್​ ರೂಮ್​ನಲ್ಲಿ ಟೀಮ್​ ಇಂಡಿಯಾ (Team India) ಬಗ್ಗೆ ಮಾತನಾಡುವುದನ್ನು ನಿಷೇಧಿಸಿರುವುದಾಗಿ ಹೇಳಿದ್ದಾರೆ. ಇದಕ್ಕೆ ಕಾರಣವನ್ನು ಸಹ ಅವರು ನೀಡಿದ್ದು, ಭಾರತದ (Team India) ಬಗ್ಗೆ ಪಾಕ್​ಗೆ ಇರುವ ಭಯ ಮತ್ತೊಮ್ಮೆ ಸಾಬೀತಾಗಿದೆ.

ಈ ಕುರಿತು ಮಾತನಾಡಿರುವ ಮೊಹಮ್ಮದ್​ ಹ್ಯಾರಿಸ್​ (Mohammed Haris), ಪಾಕಿಸ್ತಾನ ತಂಡದ ಆಟಗಾರರು ಟೀಮ್​ ಇಂಡಿಯಾದ (Team India) ಬಗ್ಗೆ ಮಾತನಾಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಟೂರ್ನಿ ನಡೆಯುವ ವೇಳೆ ಟೀಮ್​ ಇಂಡಿಯಾದ (Team India) ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ನಾನು 2023 ರ ವಿಶ್ವಕಪ್‌ನಲ್ಲಿ ಆಡಿದಾಗ, ಎಲ್ಲರೂ ಭಾರತದ ಪ್ರದರ್ಶನದ ಬಗ್ಗೆ ಮಾತನಾಡುತ್ತಿದ್ದರು. ಇದು ನಮ್ಮ ಮೇಲೆ ಸಾಕಷ್ಟು ಒತ್ತಡವನ್ನು ಸೃಷ್ಟಿಸಿತು. ಹೀಗಾಗಿ ಭಾರತ ತಂಡದ (Team India) ಬಗ್ಗೆ ಯಾವ ಆಟಗಾರನೂ ಮಾತನಾಡುವಂತಿಲ್ಲ ಎಂದು ಹೇಳಿದ್ದಾರೆ.

ಎಮರ್ಜಿಂಗ್​ ಏಷ್ಯಾಕಪ್‌ನಲ್ಲಿ (Emerging AsiaCup) 8 ತಂಡಗಳು ಭಾಗವಹಿಸಲಿದ್ದು, ಎ ಗುಂಪಿನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಗ್ ಕಾಂಗ್ ಮತ್ತು ಶ್ರೀಲಂಕಾ ತಂಡಗಳಿವೆ. ಬಿ ಗುಂಪಿನಲ್ಲಿ ಭಾರತ (Team India), ಓಮನ್, ಪಾಕಿಸ್ತಾನ ಮತ್ತು ಯುಎಇ ತಂಡಗಳಿವೆ. ಅಕ್ಟೋಬರ್​ 19ರಂದು ಭಾರತ (Team India) ಹಾಗೂ ಪಾಕಿಸ್ತಾನ (Pakistan) ನಡಯವೆ ಪಂದ್ಯ ನಡೆಯಲಿದ್ದು, ಅಕ್ಟೋಬರ್ 21ರಂದು ಯುಎಇ, ಅಕ್ಟೋಬರ್ 23ರಂದು ಓಮಾನ್, ಅಕ್ಟೋಬರ್​ 27ರಂದು ಫೈನಲ್​ ನಡೆಯಲಿದೆ.

ಟೀಮ್​ ಇಂಡಿಯಾ

ತಿಲಕ್ ವರ್ಮಾ (ನಾಯಕ), ವೈಭವ್ ಅರೋರಾ, ಆಯುಷ್ ಬಧೋನಿ, ರಾಹುಲ್ ಚಹಾರ್, ಅನ್ಶುಲ್ ಕಾಂಬೋಜ್, ಸಾಯಿ ಕಿಶೋರ್, ಆಕಿಬ್ ಖಾನ್, ಅನುಜ್ ರಾವತ್, ರಾಸಿಖ್ ಸಲಾಂ, ನಿಶಾಂತ್ ಸಿಂಧು, ಪ್ರಭಾಸಿಮ್ರಾನ್ ಸಿಂಗ್, ಅಭಿಷೇಕ್ ಶರ್ಮಾ, ರಮಣದೀಪ್ ಸಿಂಗ್, ಹೃತಿಕ್ ಶೌಕೀನ್, ನೆಹಾಲ್ ವಧೇರಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net