

ಅಡಿಲೇಡ್: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾವನ್ನು ಮಣಿಸಿ ಭಾರತ ತಂಡ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಬುಧವಾರ ನಡೆದ 4ನೇ ಲೀಗ್ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ತಂಡ, 5 ರನ್ಗಳ ಅಂತರದಲ್ಲಿ ಸೋಲುಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್ ಕಳೆದುಕೊಂಡ 184 ರನ್ ಪಡೆದು ಎದುರಾಳಿ ತಂಡಕ್ಕೆ 185 ರನ್ಗಳ ಗುರಿ ನೀಡಿತ್ತು. 186 ರನ್ಗಳ ಬೆನ್ನಟ್ಟಿದ ಬಾಂಗ್ಲಾಪಡೆಗೆ ಮಳೆಯಿಂದಾಗಿ 2ನೇ ಇನ್ನಿಂಗ್ಸ್ನಲ್ಲಿ 16 ಓವರ್ಗೆ ಇಳಿಸಿ 151 ರನ್ಗಳ ಗುರಿ ನೀಡಲಾಗಿತ್ತು. ಆದರೆ, 145 ರನ್ ಪೇರಿಸಲಷ್ಟೇ ಸಾಧ್ಯವಾಯಿತು. ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಸಿಡಿಸಿದ ಅರ್ಧಶತಕ ಭಾರತ ತಂಡದ ರನ್ಗಳ ಮೊತ್ತ ಹೆಚ್ಚಿಸಿದ್ದರು.
ಟಿ20 ವಿಶ್ವಕಪ್ನ ಟೂರ್ನಿಯ ಮೊದಲ ಮೂರು ಪಂದ್ಯದಲ್ಲಿ ಕೇವಲ 22 ರನ್ ಗಳಿಸಿ ವೈಫಲ್ಯ ಕಂಡಿದ್ದ ಉಪನಾಯಕ ಕೆ.ಎಲ್ ರಾಹುಲ್, ಇಂದಿನ ಪಂದ್ಯದಲ್ಲಿ 32 ಬಾಲ್ಗೆ 50 ರನ್ ಪಡೆದು ಟೀಕೆ ಮಾಡುವವರಿಗೆ ಬ್ಯಾಟಿಂಗ್ನಲ್ಲೇ ಉತ್ತರ ನೀಡಿದ್ದಾರೆ. ಕೊನೇವರೆಗೂ ಆಟವಾಡಿದ ವಿರಾಟ್ ಕೊಹ್ಲಿ, 44 ಬಾಲ್ಗೆ 64 ರನ್ ಪಡೆದು ವಿಕೆಟ್ ಉಳಿಸಿಕೊಂಡರು. ಮಿಂಚಿನ ಆಟವಾಡುತ್ತಿದ್ದ ಸೂರ್ಯಕುಮಾರ್ ಯಾದವ್ 16 ಬಾಲ್ಗೆ 30 ರನ್ ಪಡೆದು ಔಟಾದರು. ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.