ಮಹಿಳೆಯರ ಫಿಫಾ ವಿಶ್ವಕಪ್​ನಲ್ಲಿ ಸ್ವೀಡನ್​ಗೆ 3ನೇ ಸ್ಥಾನದ ಸಂಭ್ರಮ, ಆತಿಥೇಯ ಆಸೀಸ್​ 4ನೇ ಸ್ಥಾನಕ್ಕೆ ತೃಪ್ತಿ

fifa wc web
Published on

ಬ್ರಿಸ್ಬೇನ್​: ಫ್ರಿಡೋಲಿನಾ ರಾಲ್ಫೋ (30ನೇ ನಿಮಿಷ) ಮತ್ತು ಕೊಸೊವೇರ್​ ಅಸ್ಲಾನಿ (62ನೇ ನಿಮಿಷ) ಸಿಡಿಸಿದ ಗೋಲುಗಳ ನೆರವಿನಿಂದ ಸ್ವೀಡನ್​ ತಂಡ ಮಹಿಳೆಯರ ಫಿಫಾ ವಿಶ್ವಕಪ್​ ಟೂರ್ನಿಯಲ್ಲಿ ಜಂಟಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು 2&0 ಅಂತರದಿಂದ ಮಣಿಸಿ 3ನೇ ಸ್ಥಾನದ ಸಂಭ್ರಮ ಕಂಡಿದೆ.

ಸ್ವೀಡನ್​ ಟೂರ್ನಿ ಇತಿಹಾಸದಲ್ಲಿ 4ನೇ ಬಾರಿಗೆ ಕಂಚಿನ ಪದಕ ಗೆದ್ದುಕೊಂಡಿತು. ಈ ಮುನ್ನ 1991, 2011 ಮತ್ತು 2019ರಲ್ಲೂ ಈ ಸಾಧನೆ ಮಾಡಿತ್ತು. ಆಸ್ಟ್ರೆಲಿಯಾ 4ನೇ ಸ್ಥಾನಕ್ಕೆ ತೃಪ್ತಿಪಟ್ಟ ನಡುವೆಯೂ ಟೂರ್ನಿ ಇತಿಹಾಸದಲ್ಲಿ ತನ್ನ ಶ್ರೇಷ್ಠ ಸಾಧನೆ ದಾಖಲಿಸಿತು.

ಹಾಲಿ ಚಾಂಪಿಯನ್​ ಅಮೆರಿಕ, ಮಾಜಿ ಚಾಂಪಿಯನ್​ ಜಪಾನ್​ನಂಥ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಮುನ್ನುಗ್ಗಿದ್ದ ಸ್ವೀಡನ್​, 3ನೇ ಸ್ಥಾನಕ್ಕಾಗಿ ಶನಿವಾರ ನಡೆದ ಹೋರಾಟದಲ್ಲೂ ಆಸೀಸ್​ ವಿರುದ್ಧ ಪ್ರಾಬಲ್ಯ ಸಾಧಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net