VIDEO: ಏಷ್ಯಾಕಪ್​ ಸಿದ್ಧತೆಗಾಗಿ ಕೆಂಡದ ಮೇಲೆ ನಡೆದ ಬಾಂಗ್ಲಾ ಕ್ರಿಕೆಟಿಗ!

band kenda
Published on

ಢಾಕಾ: ಬಾಂಗ್ಲಾದೇಶ ತಂಡದ ಆರಂಭಿಕ ಮೊಹಮದ್​ ನೈಮ್​ ಶೇಕ್​ ಕೆಂಡದ ಮೇಲೆ ನಡೆದಿದ್ದಾರೆ! ಇದು ಯಾವುದೇ ನಂಬಿಕೆ ಅಥವಾ ಮೂಢನಂಬಿಕೆಯ ಭಾಗವಾಗಿಲ್ಲ. ಬದಲಾಗಿ ಏಷ್ಯಾಕಪ್​ಗೆ ಅವರ ಮಾನಸಿಕ ಸಿದ್ಧತೆಯ ಭಾಗವಾಗಿದೆ!

ಹೌದು, ಬಾಂಗ್ಲಾದೇಶ ತಂಡದ ಮ್ಯಾನೇಜರ್​ ಸ್​ೈ ಅಹ್ಮದ್​ ಸಾಮಾಜಿಕ ಜಾಲತಾಣದಲ್ಲಿ, 23 ವರ್ಷದ ಬ್ಯಾಟರ್​ ನೈಮ್​ ಶೇಕ್​ ಕೆಂಡದ ಮೇಲೆ ಯಾವುದೇ ಭೀತಿ ಇಲ್ಲದೆ ನಡೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಈ ವಿಷಯವನ್ನು ತಿಳಿಸಿದ್ದಾರೆ. ನೈಮ್​ ಶೇಕ್​ ಬಾಂಗ್ಲಾ ಪರ ಇದುವರೆಗೆ 1 ಟೆಸ್ಟ್​, 4 ಏಕದಿನ ಮತ್ತು 35 ಟಿ20 ಪಂದ್ಯ ಆಡಿದ್ದಾರೆ.

ಶೇಕ್​ ನೈಮ್​ ಅವರ ಈ ಕೆಂಡದ ಮೇಲಿನ ನಡಿಗೆ ಎಷ್ಟರ ಮಟ್ಟಿಗೆ ಯಶ ತಂದುಕೊಡಲಿದೆ ಎಂಬುದು ಏಷ್ಯಾಕಪ್​ನಲ್ಲಿ ಗೊತ್ತಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net