

ಬೆಂಗಳೂರು: ಆರಂಭಿಕ ಕೆ. ಸಿದ್ಧಾರ್ಥ್ (100*ರನ್, 64 ಎಸೆತ, 9 ಬೌಂಡರಿ, 4 ಸಿಕ್ಸರ್) ಶತಕದ ಬಲದಿಂದ ಮಂಗಳೂರು ಡ್ರಾ$ಗನ್ಸ್ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯಲ್ಲಿ ಹಾಲಿ ರನ್ನರ್ಅಪ್ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 23 ರನ್ಗಳಿಂದ ಗೆಲುವು ದಾಖಲಿಸಿದೆ. ಕೆ. ಗೌತಮ್ ಬಳಗಕ್ಕೆ ಇದು ಟೂರ್ನಿಯಲ್ಲಿ 2ನೇ ಗೆಲುವಾಗಿದ್ದರೆ, ಮಯಾಂಕ್ ಅಗರ್ವಾಲ್ ಸಾರಥ್ಯದ ಬೆಂಗಳೂರು ತಂಡ ಸತತ 4ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲೇ ಉಳಿದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಶುಕ್ರವಾರದ 2ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಮಂಗಳೂರು ತಂಡ 3 ವಿಕೆಟ್ಗೆ 194 ರನ್ ಪೇರಿಸಿತು. ಸಿದ್ಧಾರ್ಥ್ 3ನೇ ವಿಕೆಟ್ಗೆ ಶಿವಕುಮಾರ್ (40) ಜತೆ 90 ರನ್ ಜತೆಯಾಟವಾಡಿದರೆ, ಮುರಿಯದ 4ನೇ ವಿಕೆಟ್ಗೆ ಅನಿರುದ್ಧ ಜೋಶಿ (31) ಜತೆ 37 ಎಸೆತಗಳಲ್ಲೇ 73 ರನ್ ದೋಚಿದರು. ಪ್ರತಿಯಾಗಿ ಆದಿತ್ಯ ಗೋಪಾಲ್ (35ಕ್ಕೆ 3) ದಾಳಿಗೆ ಕುಸಿದ ಬೆಂಗಳೂರು ತಂಡ 8 ವಿಕೆಟ್ಗೆ 171 ರನ್ ಗಳಿಸಲಷ್ಟೇ ಶಕ್ತವಾಯಿತು.
ಮಂಗಳೂರು ಡ್ರಾ$ಗನ್ಸ್: 3 ವಿಕೆಟ್ಗೆ 194 (ಕೆ. ಸಿದ್ಧಾರ್ಥ್ 100*, ಶಿವಕುಮಾರ್ 40, ಅನಿರುದ್ಧ 31*, ರಿಷಿ ಬೋಪಣ್ಣ 40ಕ್ಕೆ 1), ಬೆಂಗಳೂರು ಬ್ಲಾಸ್ಟರ್ಸ್: 8 ವಿಕಟ್ಗೆ 171 (ಡಿ. ನಿಶ್ಚಲ್ 61, ಶುಭಾಂಗ್ ಹೆಗ್ಡೆ 45, ಸೂರಜ್ ಅಹುಜಾ 32, ಆದಿತ್ಯ 35ಕ್ಕೆ 3, ಸಂಕಲ್ಪ 20ಕ್ಕೆ 2). ಪಂದ್ಯಶ್ರೇಷ್ಠ: ಕೆ. ಸಿದ್ಧಾರ್ಥ್.