ಪ್ರೊ ಕಬಡ್ಡಿ ಲೀಗ್​-10ರಲ್ಲಿ ಬೆಂಗಳೂರು ಬುಲ್ಸ್​ಗೆ 7ನೇ ಜಯ; ಪ್ಲೇಆಫ್​ ಆಸೆ ಜೀವಂತ

pro web
Published on

ನವದೆಹಲಿ: ಸುಶೀಲ್​ (10) ಮತ್ತು ಅತ್​ (8) ಭರ್ಜರಿ ರೈಡಿಂಗ್​ ಬಲದಿಂದ ಬೆಂಗಳೂರು ಬುಲ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ 7ನೇ ಗೆಲುವು ದಾಖಲಿಸಿದ್ದು, ಪ್ಲೇಆಫ್​ ಅವಕಾಶ ವೃದ್ಧಿಸಿಕೊಂಡಿದೆ.

ಯು ಮುಂಬಾ ವಿರುದ್ಧ ಭಾನುವಾರ ನಡೆದ ತನ್ನ 18ನೇ ಲೀಗ್​ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ತಂಡ 42-37 ಅಂತರದಿಂದ ಗೆಲುವು ಸಾಧಿಸಿತು. ಈ ಮೂಲಕ ಬುಲ್ಸ್​ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ. ಮೊದಲಾರ್ಧದಲ್ಲಿ 22-24ರಿಂದ ಹಿನ್ನಡೆ ಅನುಭವಿಸಿದ ಬುಲ್ಸ್​, ದ್ವೀತಿಯಾರ್ಧದಲ್ಲಿ ತಿರುಗೇಟು ನೀಡಿತು.

ದಿನದ 2ನೇ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ತಂಡ 42-30ರಿಂದ ತಮಿಳ್​ ತಲೈವಾಸ್​ ಎದುರು ಗೆಲುವು ಸಾಧಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net