

ಧರ್ಮಶಾಲಾ: ಇಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಪಿಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್ ಸರಣಿಯ 2ನೇ ದಿನದಂದು ಟೀಂ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ತಮ್ಮ ಮುಂಬೈ ತಂಡದ ಸಹ ಕ್ರಿಕೆಟಿಗನಾದ ಸರ್ಫರಾಜ್ ಖಾನ್ ಅವರು ಬಿರು ಬಿಸಿಲಿನಲ್ಲಿ ಸಿಡಿಸಿದ ಅರ್ಧಶತಕಕ್ಕೆ ಫಿದಾ ಆಗಿದ್ದಾರೆ. ಈ ಕುರಿತು ಸರ್ಫ್ರಾಜ್ ಅವರ ಫೋಟೋ ಪೋಸ್ಟ್ ಮಾಡಿದ ಯಾದವ್ ಹಾಕಿದ್ದು ಮಾತ್ರ ಒಂದೇ ಒಂದು ಸಾಲು....
ಕೇವಲ 55 ಎಸೆತಗಳಲ್ಲಿ ಸರಣಿಯ ಮೂರನೇ ಅರ್ಧಶತಕವನ್ನು ಸಿಡಿಸಿದ ಸರ್ಫರಾಜ್ ಖಾನ್ ಈ ಮೂಲಕ ತಂಡಕ್ಕೆ ಅತ್ಯುತ್ತಮ ಪ್ರದರ್ಶನ ನೀಡಿದರು. ದೇವದತ್ ಪಡಿಕ್ಕಲ್ (108 ಎಸೆತಗಳಲ್ಲಿ 65) ಅವರೊಂದಿಗೆ ಸರ್ಫರಾಜ್ ಖಾನ್ ಅವರ 97 ರನ್‌ಗಳ ಜತೆಯಾಟವು ಭಾರತದ ಮಧ್ಯಮ ಕ್ರಮಾಂಕವನ್ನು ಬಲಪಡಿಸಿಕೊಂಡಿತು ಮತ್ತು ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 350 ರನ್‌ಗಳ ಗಡಿ ದಾಟಿಸಲು ಸಹಾಯ ಮಾಡಿತು.
ಸರ್ಫರಾಜ್ ಖಾನ್ ಅರ್ಧಶತಕ ಸಿಡಿಸಿದ್ದಕ್ಕೆ ಖುಷಿಪಟ್ಟ ಸೂರ್ಯಕುಮಾರ್ ಯಾದವ್, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "ಶೇರ್ ಭೂಕಾ ಹೈ (ಟೈಗರ್ ಈಸ್ ಹಂಗ್ರಿ)" ಎಂದು ಬರೆದು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).