

ತಮಿಳುನಾಡು: ಅಸ್ಟೇಲಿಯಾ ವಿರುದ್ಧದ ಟೆಸ್ಟ್ನ ಮೂರನೇ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಇಂಡಿಯಾ ಸ್ಟಾರ್ ಸ್ಪೀನ್ನರ್(Spinner) ಆರ್.ಅಶ್ವಿನ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಆಟಕ್ಕೆ ವಿದಾಯ ಘೋಷಿಸಿದ್ದಾರೆ. ಈ ದಿಢೀರ್ ಈ ನಿರ್ಧಾರದ ವಿರುದ್ಧ ಅನೇಕರು ಟೀಕೆ ವ್ಯಕ್ತಪಡಿಸಿದ ಹಿನ್ನೆಲೆ ಅಶ್ವಿನ್ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.
ಹೌದು, ಅನೇಕ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗರು ಅಶ್ವಿನ್ ನಿವೃತ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲ ಆಟಗಾರರು ಟೀಕೆ ಜತೆ ಬೇಸರ ಹೊರ ಹಾಕಿದ್ದಾರೆ.
ಅಶ್ವಿನಿ ನಿರ್ಧಾರವನ್ನು ಮೊದಲಿಗೆ ಮಾಜಿ ಆಟಗಾರ ಸುನಿಲ್ ಗವಸ್ಕಾರ್ ಮಾತನಾಡಿದ್ದು, ಅಶ್ವಿನ್ ನಿವೃತ್ತಿ ಹೊಂದಲು ಬಯಸಿದ್ದರೆ ಸರಣಿ ಮುಗಿಯುವವರೆಗೆ ಕಾಯಬೇಕಿತ್ತು. ಆದರೆ, ಅಶ್ವಿನ್ ಅವರ ಹಠಾತ್ ನಿವೃತ್ತಿ ಘೋಷಣೆಯು ಟೀಮ್ ಇಂಡಿಯಾದ ಉಳಿದ ಯೋಜನೆಗಳ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಟೆಸ್ಟ್ ಸರಣಿ 1-1ರ ಸಮಬಲದಲ್ಲಿದೆ. ಇಂತಹ ಹಂತದಲ್ಲಿ ಅಶ್ವಿನ್ ನಿವೃತ್ತಿ ಘೋಷಣೆ ಮಾಡಿರುವುದು ಸರಣಿಯ ಫಲಿತಾಂಶವನ್ನೇ ಬದಲಿಸಬಹುದು ಎಂದು ಗವಾಸ್ಕರ್ ಹೇಳಿದ್ದರು.
ಇದರ ಬೆನ್ನಲ್ಲೇ, ಮಾಜಿ ಆಟಗಾರ ಅನಿಲ್ ಕುಂಬ್ಳೆ ಮಾತನಾಡಿದ್ದು, ನಿಮ್ಮ ಈ ನಿರ್ಧಾರ ಅಸಮಾಧಾನ ತಂದಿದೆ. ಆದರೆ, ಅದಕ್ಕೆ ನಿಮ್ಮದೇ ಆದ ಕಾರಣಗಳಿವೆ. ಅಭಿನಂದನೆಗಳು ಅಶ್ವಿನ್, ಈ ಅದ್ಭುತವಾದ ವೃತ್ತಿಜೀವನಕ್ಕೆ. ನೀವು ಭಾರತಕ್ಕೆ ಚಾಂಪಿಯನ್ ಬೌಲರ್ ಆಗಿದ್ದೀರಿ. ಟೀಮ್ ಇಂಡಿಯಾ ಚಾಂಪಿಯನ್ ಆಲ್‌ರೌಂಡರ್ ಆಗಿ ಹೊರಹೊಮ್ಮಿದ್ದೀರಿ. ಖಂಡಿತವಾಗಿಯೂ ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೀವಿ. ನಿವೃತ್ತಿ ಅನ್ನೋದು ಅಷ್ಟು ಸುಲಭವಲ್ಲ. ಟೀಮ್ ಇಂಡಿಯಾ ಮತ್ತು ಫ್ಯಾನ್ಸ್ ನಿಮ್ಮನ್ನು ಬಹಳ ಮಿಸ್ ಮಾಡುಕೊಳ್ಳಲಿದ್ದಾರೆ ಎಂದಿದ್ದಾರೆ.
ಇದೇಲ್ಲದರ ನಡುವೆ ಆಶ್ವಿನ್ ನಿವೃತ್ತಿ ಘೋಷಿಸಿ ಭಾರತಕ್ಕೆ ಮರಳಿದ್ದಾರೆ. ಚೈನ್ನೈನ ತಮ್ಮ ನಿವಾಸಕ್ಕೆ ಬಂದಿಳಿದಾಗ ಅದ್ದೂರಿ ಸ್ವಾಗತದಿಂದ ಬರಮಾಡಿಕೊಳ್ಳಲಾಯಿತು. ಬಳಿಮ ಸುದ್ದಿಗಾರ ಜತೆ ಅಶ್ವಿನ್ ಮಾತನಾಡಿದ್ದಾರೆ.
ಮುಂಬರುವ ಟೆಸ್ಟ್ ಪಂದ್ಯಗಲ್ಲಿ ನಿಮಗೆ ಅವಕಾಶಗಳು ಕಡಿಮೆ ಹಿನ್ನೆಲೆ ನಿವೃತ್ತಿ ಘೋಷಿಸಿದ್ದಿರಿ ಎಂದು ಹೇಳಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿ ಅಶ್ವಿನ್, ನಿವೃತ್ತಿ ಘೋಷಣೆಯಿಂದ ಯಾವ ಪಶ್ಚಾತ್ತಾಪವಿಲ್ಲ. ಇದರಿಂದ ಸಂತೋಷ ಮತ್ತು ತೃಪ್ತಿಯಿಂದ ಇದ್ದೇನೆ ಎಂದು ಒತ್ತಿ ಹೇಳಿದರು. ಅಲ್ಲದೇ, ಅವಕಾಶ ಕಡಿಮೆ ಎನ್ನುವುದು ವದಂತಿ ಎಂದು ತಳ್ಳಿ ಹಾಕಿದರು.
''ನಾನು ಸಿಎಸ್ಕೆ(CSK) ತಂಡಕ್ಕಾಗಿ ಆಡಲಿದ್ದಾನೆ. ನಾನು ಕೊನೆಯವರೆಗೂ ಆಡಲು ಪ್ರಯತ್ನಿಸುವೆ. ಅಶ್ವಿನ್ ಕ್ರಿಕೆಟ್ನಿಂದ ನಿಷ್ಕಿಯೆಯಾಗಿದ್ದಾನೆ ಎಂದು ಭಾವಿಸಿಕೊಳ್ಳಬೇಡಿ. ಯಾರು ಬೇಸರಪಡಬೇಡಿ ಎಂದಿದ್ದಾರೆ.''(ಏಜೆನ್ಸೀಸ್).