ವಿಶ್ವಕಪ್​ ಬೆನ್ನಲ್ಲೇ ಬೆನ್​ ಸ್ಟೋಕ್ಸ್​ಗೆ ಸರ್ಜರಿ, ಭಾರತ ಪ್ರವಾಸಕ್ಕೆ ಅನುಮಾನ

stokes web
Published on

ಕಾರ್ಡಿಫ್​: ಇಂಗ್ಲೆಂಡ್​ ಟೆಸ್ಟ್​ ತಂಡದ ನಾಯಕ ಹಾಗೂ ಆಲ್ರೌಂಡರ್​ ಬೆನ್​ ಸ್ಟೋಕ್ಸ್​ ಏಕದಿನ ವಿಶ್ವಕಪ್​ ಟೂರ್ನಿಯ ಬಳಿಕ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಅವರು ಮುಂದಿನ ವರ್ಷಾರಂಭದಲ್ಲಿ ಭಾರತದಲ್ಲಿ ನಡೆಯಲಿರುವ 5 ಪಂದ್ಯಗಳ ಟೆಸ್ಟ್​ ಸರಣಿಗೆ ಇಂಗ್ಲೆಂಡ್​ ತಂಡಕ್ಕೆ ಲಭ್ಯರಾಗುವುದು ಅನುಮಾನವೆನಿಸಿದೆ.

ಕಳೆದ ಕೆಲ ಸಮಯದಿಂದ ಮೊಣಕಾಲು ಗಾಯದ ಸಮಸ್ಯೆ ಎದುರಿಸುತ್ತಿರುವ ಸ್ಟೋಕ್ಸ್​, ಕಳೆದ ಆಶಸ್​ ಸರಣಿಯ ಕೊನೇ 3 ಟೆಸ್ಟ್​ಗಳಲ್ಲಿ ಬೌಲಿಂಗ್​ ಮಾಡದೆ, ಕೇವಲ ಬ್ಯಾಟರ್​ ಆಗಿ ಆಡಿದ್ದರು. ವಿಶ್ವಕಪ್​ಗೆ ಪೂರ್ವಭಾವಿಯಾಗಿ ಸ್ಟೋಕ್ಸ್​ ಏಕದಿನ ಕ್ರಿಕೆಟ್​ ನಿವೃತ್ತಿ ಹಿಂಪಡೆದಿದ್ದರೂ, ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲೂ ಕೇವಲ ಬ್ಯಾಟರ್​ ಆಗಿ ಆಡಲಿದ್ದಾರೆ ಎನ್ನಲಾಗಿದೆ. ಮತ್ತೆ ಪೂರ್ಣ ಪ್ರಮಾಣದ ಆಲ್ರೌಂಡರ್​ ಆಗಿ ಆಡಬೇಕಾದರೆ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅನಿವಾರ್ಯವೆನಿಸಿದೆ.

ಭಾರತ ವಿರುದ್ಧದ ಟೆಸ್ಟ್​ ಸರಣಿ 2024ರ ಜನವರಿ 25ರಿಂದ ನಡೆಯಲಿದೆ. ನವೆಂಬರ್​ 19ರಂದು ಮುಕ್ತಾಯಗೊಳ್ಳಲಿರುವ ವಿಶ್ವಕಪ್​ ಬೆನ್ನಲ್ಲೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರೂ, ಚೇತರಿಸಿಕೊಳ್ಳಲು ಕನಿಷ್ಠ 8-12 ವಾಗಳ ವಿಶ್ರಾಂತಿ ಅಗತ್ಯವೆನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net