ಶರದ್​ ಪವಾರ್​​ ಕ್ರಿಕೆಟ್ ಮ್ಯೂಸಿಯಂ ಉದ್ಘಾಟನೆ; ಪ್ರತಿಮೆ ಅನಾವರಣ | MCA

MCA Launches Sharad Pawar Cricket Museum
Published on

MCA: ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರ ಪ್ರತಿಮೆಗಳನ್ನು ಶನಿವಾರ (ಆಗಸ್ಟ್​​ 23) ಅನಾವರಣಗೊಳಿಸಲಾಯಿತು.

ವಾಂಖೆಡೆ ಮೈದಾನದಲ್ಲಿರುವ ಶರದ್ ಪವಾರ್ ಕ್ರಿಕೆಟ್ ಮ್ಯೂಸಿಯಂನ ಉದ್ಘಾಟನೆಯ ಜೊತೆ ಜೊತೆಗ ಈ ಎರಡು ಪ್ರತಿಮೆಗಳ ಅನಾವರಣ ಕಾರ್ಯಕ್ರಮವು ನಡೆಯಿತು. ಹಿರಿಯ ನಾಯಕ ಶರದ್​​ ಪವಾರ್ ಕ್ರೀಡೆ ಅದರಲ್ಲೂ ವಿಶೇಷವಾಗಿ ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ಈ ಗೌರವಗಳನ್ನು ನೀಡಲಾಗಿದೆ. ಈ ಸಮಾರಂಭದಲ್ಲಿ ಕ್ರಿಕೆಟ್ ಮತ್ತು ರಾಜಕೀಯ ವಲಯದ ಹಲವಾರು ಗಣ್ಯರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಟೆಸ್ಟ್​​ ಕ್ರಿಕೆಟ್​​ನಲ್ಲಿ 10,000 ರನ್‌ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸುನಿಲ್​ ಗವಾಸ್ಕರ್​​, ಭಾರತೀಯ ಕ್ರಿಕೆಟ್​​ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಪ್ರತಿಮೆಯನ್ನು ಇಲ್ಲಿ ನಿರ್ಮಿಸುವ ಮೂಲಕ ವಿಶೇಷವಾಗಿ ಗೌರವಿಸಲಾಗಿದೆ.

ಬಿಸಿಸಿಐ ಮತ್ತು ಐಸಿಸಿಯ ನೇತೃತ್ವವಹಿಸಿದ್ದ ಶರದ್ ಪವಾರ್, ಕ್ರಿಕೆಟ್​​ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.  . ಶರದ್ ಪವಾರ್ ವಸ್ತುಸಂಗ್ರಹಾಲಯವು ಭಾರತೀಯ ಕ್ರಿಕೆಟ್‌ನ ಸ್ಮರಣಿಕೆಗಳು, ಛಾಯಾಚಿತ್ರಗಳು ಮತ್ತು ಐತಿಹಾಸಿಕ ಮೈಲಿಗಲ್ಲುಗಳನ್ನು ಇಲ್ಲಿ ಇರಿಸಲಾಗಿದ್ದು, ಮುಂಬೈ, ಕ್ರಿಕೆಟ್​​ಗೆ ನೀಡಿದ ಕೊಡುಗೆಯನ್ನು ವಿಶೇಷವಾಗಿ ಕೇಂದ್ರೀಕರಿಸುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net