

ಬೆಂಗಳೂರು: ಮುಂದಿನ ವರ್ಷಾರಂಭದಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ಮಹಿಳೆಯರ 19 ವಯೋಮಿತಿಯ ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಆರಿಸುವ ನಿಟ್ಟಿನಲ್ಲಿ ಮಹತ್ವದ ವೇದಿಕೆಯಾಗಿ 19 ವಯೋಮಿತಿಯ ತ್ರಿಕೋನ ಸರಣಿಯನ್ನು ಬಿಸಿಸಿಐ ಆಯೋಜಿಸಿದೆ.
ಡಿಸೆಂಬರ್ 3ರಿಂದ 12ರವರೆಗೆ ಪುಣೆಯಲ್ಲಿ ಟೂರ್ನಿ ನಡೆಯಲಿದ್ದು, ಪ್ರವಾಸಿ ದ. ಆಫ್ರಿಕಾ ತಂಡದೊಂದಿಗೆ ಭಾರತ ಎ ಮತ್ತು ಭಾರತ ಬಿ ತಂಡಗಳು ಸ್ಪರ್ಧಿಸಲಿವೆ.
ಭಾರತ ಬಿ ತಂಡಕ್ಕೆ ಕನ್ನಡತಿ ನಿಕಿ ಪ್ರಸಾದ್ ನಾಯಕಿಯಾಗಿ ನೇಮಕಗೊಂಡಿದ್ದು, ರಾಜ್ಯದ ಮತ್ತೋರ್ವ ಆಟಗಾರ್ತಿ ಮಿಥಿಲಾ ವಿನೋದ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 18 ವರ್ಷದ ನಿಕಿ, ಮಿಥಿಲಾ ಇಬ್ಬರೂ ಆಲ್ರೌಂಡರ್ಗಳಾಗಿದ್ದಾರೆ.