ಐಪಿಎಲ್​ ಹರಾಜಿನಲ್ಲಿ ರಿಷಭ್​ ಪಂತ್​ಗೆ 27 ಕೋಟಿ ರೂ. ಬಿಡ್​; ಆದರೆ ತೆರಿಗೆ ಕಡಿತವಾಗಿ ಸಿಗುವ ಹಣವೆಷ್ಟು ಗೊತ್ತೇ?

web pant
Published on

ನವದೆಹಲಿ: ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕೆಲ ಕ್ರಿಕೆಟಿಗರು ಕೋಟಿ ಕೋಟಿ ಮೌಲ್ಯಕ್ಕೆ ಮಾರಾಟವಾಗುವ ಮೂಲಕ ಗಮನಸೆಳೆದಿದ್ದಾರೆ. ಆದರೆ ಈ ಮೊತ್ತದಲ್ಲಿ ಎಲ್ಲವೂ ಕ್ರಿಕೆಟಿಗರ ಜೇಬು ಸೇರುವುದಿಲ್ಲ. ಕೇಂದ್ರ ಸರ್ಕಾರ ಇದರಲ್ಲಿ ತೆರಿಗೆ ಕಡಿತ ಮಾಡಲಿದೆ.

ಹರಾಜಿನಲ್ಲಿ ಸರ್ವಾಧಿಕ 27 ಕೋಟಿ ರೂಪಾಯಿಗೆ ಮಾರಾಟವಾದ ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​ ಈ ಪೈಕಿ 18.9 ಕೋಟಿ ರೂ.ಯನ್ನು ತನ್ನದಾಗಿಸಿಕೊಳ್ಳಲಿದ್ದಾರೆ. ಉಳಿದಂತೆ 8.1 ಕೋಟಿ ರೂ. ಮೊತ್ತವನ್ನು ಅವರು ಆದಾಯ ತೆರಿಗೆಯಾಗಿ ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.

ಹರಾಜಿನಲ್ಲಿ ಲಖನೌ ತಂಡ ಪಂತ್​ಗೆ 20.75 ಕೋಟಿ ರೂ. ಬಿಡ್​ ಮಾಡಿದಾಗ ಡೆಲ್ಲಿ ತಂಡ ಆರ್​ಟಿಎಂ ಮಾಡಿ ತನ್ನಲ್ಲೇ ಉಳಿಸಿಕೊಳ್ಳಲು ಮುಂದಾಗಿತ್ತು. ಆಗ ಲಖನೌ ತಂಡ ಒಮ್ಮೆಲೆ ಮೊತ್ತವನ್ನು 27 ಕೋಟಿ ರೂ.ಗೆ ಏರಿಸಿ ಪಂತ್​ ಅವರನ್ನು ತನ್ನದಾಗಿಸಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net