ಸಂತೋಷ್​ ಟ್ರೋಫಿಗೆ ರಾಜ್ಯ ತಂಡ ಪ್ರಕಟ; ಮನೋಜ್​ ಸ್ವಾಮಿ ಕಣ್ಣನ್​ ಸಾರಥ್ಯ

san web
Published on

ಬೆಂಗಳೂರು: ಫೆಬ್ರವರಿ 21ರಿಂದ ಮಾರ್ಚ್​ 3ರವರೆಗೆ ಅರುಣಾಚಲ ಪ್ರದೇಶದಲ್ಲಿ ನಡೆಯಲಿರುವ 77ನೇ ಆವೃತ್ತಿಯ ಸಂತೋಷ್​ ಟ್ರೋಫಿ ರಾಷ್ಟ್ರೀಯ ಫುಟ್​ಬಾಲ್​ ಚಾಂಪಿಯನ್​ಷಿಪ್​ನಲ್ಲಿ ಮನೋಜ್​ ಸ್ವಾಮಿ ಕಣ್ಣನ್​ ಹಾಲಿ ಚಾಂಪಿಯನ್​ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ನಡೆದ ಕೊನೇ ಆವೃತ್ತಿಯ ಫೈನಲ್​ನಲ್ಲಿ ಗೆದ್ದು ಬೀಗಿದ್ದ ಕರ್ನಾಟಕ ತಂಡ ಈ ಬಾರಿ ಅಂತಿಮ ಸುತ್ತಿನಲ್ಲಿ ಫೆಬ್ರವರಿ 22ರಂದು ದೆಹಲಿ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಬಳಿಕ ಫೆ. 24ರಂದು ಮಿಜೋರಾಂ, 26ರಂದು ಮಣಿಪುರ, 29ರಂದು ರೈಲ್ವೇಸ್​ ಮತ್ತು ಮಾ. 2ರಂದು ಮಹಾರಾಷ್ಟ್ರ ವಿರುದ್ಧ ಆಡಲಿದೆ.

ರಾಜ್ಯ ತಂಡ: ಕಬೀರ್​ ತೌಫಿಕ್​, ಕಿಸ್ತರಾಜನ್​, ಶ್ರೀಜಿತ್​ ಆರ್​, ನಿಖಿಲ್​ ಜಿ, ಜಾನ್​ ಪೀಟರ್​, ಪ್ರಬಿನ್​ ತಿಗ್ಗಾ, ಶಾನಿದ್​ ವಲನ್​, ಮನೋಜ್​ ಸ್ವಾಮಿ ಕಣ್ಣನ್​ (ನಾಯಕ), ಸುರೇಂದ್ರ ಪ್ರಸಾದ್​, ಮೃಣಾಲ್​ ಮುತ್ತಣ್ಣ, ಪ್ರಶಾಂತ್​ ಕಾಳಿಂಗ, ವಿಶಾಲ್​ ಆರ್​, ವಿನಿತ್​ ವೆಂಕಟೇಶ್​, ಮೊಹಮ್ಮದ್​ ಮೊಯಿನುದ್ದೀನ್​, ಕಾರ್ತಿಕ್​ ಗೋವಿಂದ್​ಸ್ವಾಮಿ, ಸತೀಶ್​ ಕುಮಾರ್​, ಗಾಡ್ವಿನ್​ ಜಾನ್ಸನ್​, ರಶೀದ್​ ಸಿಕೆ, ಅಪು$್ಪ ಡಿ, ಶೆಲ್ತೋನ್​ ಪಾಲ್​, ನಿಖಿಲ್​ ರಾಜ್​ ಮುರುಗೇಶ್​ ಕುಮಾರ್​, ವಿಘ್ನೇಶ್​ ವಿ. ಮುಖ್ಯ ಕೋಚ್​: ಆರ್​. ರವಿಬಾಬು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net