ಕರ್ನಾಟಕ ಅಥ್ಲೆಟಿಕ್ಸ್‌ನ ನೆಚ್ಚಿನ ‘ಸ್ಟಾರ್ಟರ್ ರಾಮಣ್ಣ’ ಇನ್ನಿಲ್ಲ

ramanna web
Published on

ಬೆಂಗಳೂರು: ಕರ್ನಾಟಕದ ಅಥ್ಲೆಟಿಕ್ ವಲಯದಲ್ಲಿ ‘ಸ್ಟಾರ್ಟರ್ ರಾಮಣ್ಣ’ ಎಂದೇ ಗುರುತಿಸಿಕೊಂಡಿದ್ದ ಮಾಜಿ ಅಥ್ಲೀಟ್ ಎ.ರಾಮಣ್ಣ (82 ವರ್ಷ) ವಯೋಸಹಜ ಕಾಯಿಲೆಯಿಂದ ಸೋಮವಾರ ಸಂಜೆ ನಿಧನರಾದರು.

ಫೀಲ್ಡ್ ಆಂಡ್ ಟ್ರ್ಯಾಕ್ ಸ್ಪರ್ಧೆಗಳಿಗೆ ಶೂಟ್ ಮಾಡುವ ಮೂಲಕ ಆರಂಭ ನೀಡುತ್ತಿದ್ದರು. ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಬಹುತೇಕ ಅಥ್ಲೆಟಿಕ್ ಸ್ಪರ್ಧೆಗಳಿಗೆ ರಾಮಣ್ಣ ಸ್ಟಾರ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.

1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯಾಡ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಅಥ್ಲೆಟಿಕ್ ಸಂಸ್ಥೆ, ಮಾಜಿ ಹಾಗೂ ಹಾಲಿ ಅಥ್ಲೀಟ್‌ಗಳು ರಾಮಣ್ಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net