ಟಿ20 ಪಂದ್ಯಗಳಲ್ಲಿ ಅಧಿಕ ಹ್ಯಾಟ್ರಿಕ್‌ ಹೊಂದಿರುವ ಸ್ಟಾರ್​ ಬೌಲರ್‌ಗಳು ಇವರೇ ನೋಡಿ…

Untitled-design-2024-06-24T102635.995
Published on

ನವದೆಹಲಿ: ಪ್ರಸಕ್ತ ಐಸಿಸಿ ಟಿ20 ವಿಶ್ವಕಪ್​ 2024ರ ಪಂದ್ಯಾವಳಿಗಳು ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿದ್ದು, ಜೂ.23ರಂದು ನಡೆದ ಸೂಪರ್ 8 ಕ್ಲ್ಯಾಶ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ 50 ರನ್​ಗಳ ಭರ್ಜರಿ ಜಯ ಸಾಧಿಸಿತು. ವಿಶ್ವಕಪ್​ ಟೂರ್ನಿಯಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತ ಬಂದಿರುವ ಭಾರತ ತಂಡಕ್ಕೆ ಸದ್ಯ ಕ್ರಿಕೆಟ್ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ, ಪ್ರಶಂಸೆಗಳ ಸುರಿಮಳೆಯೇ ಹರಿದುಬರುತ್ತಿವೆ.

ಇನ್ನು ಟಿ20 ಪಂದ್ಯ ಅಂದಮೇಲೆ ಬ್ಯಾಟರ್ಸ್​​ಗಳ ಕೊಡುಗೆ ಎಷ್ಟಿದೆಯೋ ಬೌಲರ್​ಗಳ ಪ್ರದರ್ಶನ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಎದುರಾಳಿಗಳು ಹೆಚ್ಚುವರಿ ರನ್​ ಕಲೆಹಾಕದಂತೆ ತಮ್ಮ ಬೌಲಿಂಗ್​ನಿಂದ ತಡೆಗಟ್ಟುವ ಬೌಲರ್​ಗಳು, ಆಕರ್ಷಕ ರೀತಿಯಲ್ಲಿ ಬೌಲಿಂಗ್​ ಮಾಡಿ, ಅಧಿಕ ವಿಕೆಟ್​ಗಳನ್ನು ಕಸಿದುಕೊಳ್ಳಬೇಕು. 3 ಓವರ್​ನಿಂದ 4 ಓವರ್​ ಬೌಲ್ ಮಾಡುವ ಆಟಗಾರರು, ಒಂದೇ ಪಂದ್ಯದಲ್ಲಿ ಅಧಿಕ ರನ್​ಗಳನ್ನು ಕೊಟ್ಟು 3 ವಿಕೆಟ್​ಗಳನ್ನು ಕಬಳಿಸುವ ಸಾಮರ್ಥ್ಯ ಹೊಂದಿರುತ್ತಾರೆ.

ಇದೇ ರೀತಿ ಕೆಲವೊಮ್ಮೆ ಕಡಿಮೆ ರನ್​ಗಳನ್ನು ಕೊಟ್ಟು ಹ್ಯಾಟ್ರಿಕ್ ಮೂರು ವಿಕೆಟ್​ಗಳನ್ನು ಕಬಳಿಸಿದ್ದು ಇದೆ. ಮೂರಕ್ಕಿಂತ ಹೆಚ್ಚು ವಿಕೆಟ್​ಗಳನ್ನು ಪಡೆಯುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ತಮ್ಮದೊಂದು ದಾಖಲೆ ಸೃಷ್ಟಿಸಿರುತ್ತಾರೆ. ಆ ಪೈಕಿ ಆಸ್ಟ್ರೇಲಿಯಾದ ಕ್ಯಾಪ್ಟನ್​ ಪ್ಯಾಟ್ ಕುಮ್ಮಿನ್ಸ್​ ಮುಂಚೂಣಿಯಲ್ಲಿದ್ದಾರೆ. ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಸತತ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್​ ಪಡೆಯುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಈ ದಾಖಲೆ ಮುಖೇನ ಕಮ್ಮಿನ್ಸ್ ಟಿ20 ಪಂದ್ಯಾವಳಿಗಳಲ್ಲಿ ಬಹು ಹ್ಯಾಟ್ರಿಕ್‌ಗಳನ್ನು ಪಡೆದ ಬೌಲರ್‌ಗಳು ಎಂಬ ವಿಶೇಷ ದಾಖಲೆಯ ಕ್ಲಬ್‌ಗೆ ಸೇರಿದ್ದಾರೆ. ಈ ಸಾಲಿಗೆ ಪ್ಯಾಟ್​ ಮೂರನೇ ಬೌಲರ್​ ಆಗಿ ಪ್ರವೇಶಿಸಿದ್ದಾರೆ. ಮಾರ್ಚ್ 1999ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ಗಳಲ್ಲಿ ಸತತ ಹ್ಯಾಟ್ರಿಕ್​ ಪಡೆದ ವಾಸೀಮ್ ಅಕ್ರಮ್ ನಂತರದಲ್ಲಿ ಜಿಮ್ಮಿ ಮ್ಯಾಥ್ಯೂಸ್ 1912ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಗಳಿಸಿದ್ದರು. ಇವರಿಬ್ಬರ ನಂತರ ಮೂರನೇ ಬೌಲರ್ ಆಗಿ ಕಮ್ಮಿನ್ಸ್​ ಈ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅಧಿಕ ಹ್ಯಾಟ್ರಿಕ್​ ಪಡೆದಿರುವ ಸ್ಟಾರ್​ 5 ಬೌಲರ್‌ಗಳು ಇವರು:

1.ಲಸಿತ್ ಮಾಲಿಂಗ (ಶ್ರೀಲಂಕಾ)

2. ಟಿಮ್ ಸೌಥಿ (ನ್ಯೂಜಿಲೆಂಡ್)

3. ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ)

4. ಸರ್ಬಿಯಾದ ಮಾರ್ಕ್ ಪಾವ್ಲೋವಿಕ್ (ಸೆರ್ಬಿಯಾ)

5. ವಸೀಮ್ ಅಬ್ಬಾಸ್ (ಮಾಲ್ಟಾ )

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net