ರಾಮ್​ಚರಣ್​, ಎನ್​ಟಿಆರ್​, ಪ್ರಭಾಸ್​ ಆಯ್ತು ಈಗ ಡೇವಿಡ್​ ವಾರ್ನರ್​ ಸರದಿ! ರಾಜಮೌಳಿ ಜತೆ ಸೇರಿದ್ರೆ ಇದೇ ಗತಿ | David Warner

David Warner
Published on

David Warner : ಯಾವುದೇ ಒಂದು ಭಾವನೆಗಳನ್ನು ನಂಬುವುದು ಅಥವಾ ನಂಬದಿರುವುದು ಒಬ್ಬರ ಆಯ್ಕೆಯಾಗಿದೆ. ಆದರೂ, ಕೆಲವೊಮ್ಮೆ ಕೆಲ ಭಾವನೆಗಳು ನಿಜವಾಗಿಬಿಡುತ್ತವೆ. ಪ್ರತಿ ಕ್ಷೇತ್ರದಲ್ಲೂ ಕೆಲವೊಂದು ನಂಬಿಕೆಗಳಿವೆ. ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ತುಸು ಹೆಚ್ಚಿದೆ. ಈ ತಿಂಗಳು ಬೇಡ ಕಳೆದ ವರ್ಷ ಇದೇ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗಿ ಫ್ಲಾಫ್​ ಆಯಿತು ಎಂದು ನಂಬುತ್ತಾರೆ. ಹೀಗೇ ಅನೇಕ ರೀತಿಯ ನಂಬಿಕೆಗಳಿವೆ.

ಟಾಲಿವುಡ್​ ಖ್ಯಾತ ನಿರ್ದೇಶಕ ರಾಜಮೌಳಿ ವಿಚಾರದಲ್ಲೂ ಒಂದು ನಂಬಿಕೆ ಇದೆ. ಅದೇನೆಂದರೆ, ರಾಜಮೌಳಿ ನಿರ್ದೇಶನದ ನಿನಿಮಾದಲ್ಲಿ ಯಶಸ್ಸು ಪಡೆದ ನಟ ಆನಂತರ ಸೋಲು ಅನುಭವಿಸುತ್ತಾರಂತೆ. ಸಿನಿಮಾ ಜೀವನದಲ್ಲಿ ರಾಜಮೌಳಿ ಅವರ ಸಿನಿಮಾಗಳೆಲ್ಲವೂ ಬ್ಲಾಕ್ ಬಸ್ಟರ್ ಆಗಿವೆ. ಆದರೆ, ಜಕ್ಕಣ್ಣ ಎಂದೇ ಖ್ಯಾತಿಯಾಗಿರುವ ರಾಜಮೌಳಿ ಚಿತ್ರಗಳಲ್ಲಿ ನಟಿಸಿದ ನಂತರ ಎಷ್ಟೇ ದೊಡ್ಡ ಸ್ಟಾರ್ ಹೀರೋ ಆಗಿದ್ದರೂ ಸೋಲು ಅನುಭವಿಸುತ್ತಾರಂತೆ. ನಟರಾದ ನಿತಿನ್, ರಾಮ್​ಚರಣ್, ಜೂನಿಯರ್ ಎನ್​ಟಿಆರ್ ಹಾಗೂ ಪ್ರಭಾಸ್​ಗೆ ಈ ಅನುಭವವಾಗಿದೆ.

ಇದು ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ ಎಂದು ಹೇಳಲಾಗುತ್ತಿದೆ. ರಾಜಮೌಳಿ ಮೇಲಿನ ಈ ನಂಬಿಕೆ ಇದೀಗ ಕ್ರಿಕೆಟ್​ಗೂ ಹಬ್ಬಿದೆ. ಈ ನಂಬಿಕೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಬಲಿಪಶುವಾಗಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಡೇವಿಡ್ ವಾರ್ನರ್ ಮಾರಾಟವಾಗದೆ ಉಳಿಯಲು ರಾಜಮೌಳಿಯವರೇ ಕಾರಣ ಎನ್ನಲಾಗಿದೆ.

ಡೇವಿಡ್ ವಾರ್ನರ್ ಮತ್ತು ರಾಜಮೌಳಿ ಜಾಹೀರಾತು ಒಂದರಲ್ಲಿ ಒಟ್ಟಿಗೆ ನಟಿಸಿದ್ದರು. ಈ ಜಾಹೀರಾತಿನಲ್ಲಿ ವಾರ್ನರ್ ಜೊತೆ ಸಿನಿಮಾ ಮಾಡಲು ರಾಜಮೌಳಿ ಬಯಸುತ್ತಾರೆ. ಸಿನಿಮಾ ಶೂಟಿಂಗ್​ ಕೂಡ ಫನ್ನಿಯಾಗಿ ನಡೆಯುತ್ತದೆ. ಒಟ್ಟಾರೆ ಜಾಹೀರಾತು ತಮಾಷೆಯಾಗಿದೆ. ಇದೀಗ ಈ ಜಾಹೀರಾತು ಮತ್ತೊಮ್ಮೆ ವೈರಲ್ ಆಗಿದೆ. ವಾರ್ನರ್ ಅವರು ರಾಜಮೌಳಿ ಜೊತೆ ಕೆಲಸ ಮಾಡಿದ್ದರಿಂದ ಹರಾಜಿನಲ್ಲಿ ನಿರಾಸೆ ಅನುಭವಿಸಿದ್ದಾರೆ ಎಂದು ನೆಟ್ಟಿಗರು ತಮಾಷೆಯ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ವಾರ್ನರ್ ಐಪಿಎಲ್ ಹರಾಜಿನಲ್ಲಿ ಕೋಟಿಗಳ ಮಳೆ ಸುರಿಸಲಿದ್ದಾರೆ ಎಂದು ಹಲವರು ನಿರೀಕ್ಷಿಸಿದ್ದರು. ಆದರೆ, 2025ರ ಐಪಿಎಲ್ ಹರಾಜಿನಲ್ಲಿ ಅವರ ಹೆಸರು ಮೊದಲ ಬಾರಿಗೆ ಬಂದಾಗ ಯಾರೂ ತೆಗೆದುಕೊಳ್ಳಲಿಲ್ಲ. ಇದರೊಂದಿಗೆ, ಎರಡನೇ ಬಾರಿಗೆ ಕನಿಷ್ಠ ರೂ.ಗೆ ಕೆಲವು ಫ್ರಾಂಚೈಸಿಗಳು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ಅದು ಕೂಡ ಆಗಲಿಲ್ಲ. 40ರ ಹರೆಯದ ಡುಪ್ಲೆಸಿಸ್ ಅವರನ್ನು ತೆಗೆದುಕೊಂಡರು. ಆದರೆ, ಯಾರು ಕೂಡ ವಾರ್ನರ್ ಅವರನ್ನು ಖರೀದಿಸಲು ಆಸಕ್ತಿ ತೋರಿಸಲಿಲ್ಲ.

ಹೀಗಾಗಿ ವಾರ್ನರ್​ಗೆ ರಾಜಮೌಳಿ ಶಾಪ ತಟ್ಟಿದೆ ಎಂಬ ಕಾಮೆಂಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ವಾರ್ನರ್ ಅವರನ್ನು ಮೈದಾನದಲ್ಲಿ ನೋಡಲಾಗುವುದಿಲ್ಲ, ಏನಿದ್ದರೂ ಇನ್ನೂ ಮನೆಯಲ್ಲಿ ರೀಲ್ಸ್ ಮಾಡಬೇಕು ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ. ವಾರ್ನರ್ ನಿವೃತ್ತಿ ಹೊಂದಿದ್ದು, ಅವರಿಗಿಂತ ಕಿರಿಯ ಆಟಗಾರರನ್ನು ನೇಮಿಸಿಕೊಳ್ಳುವುದು ಉತ್ತಮ ಎಂದು ಫ್ರಾಂಚೈಸಿಗಳು ಭಾವಿಸಿರಬೇಕು ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ.

ಅದೇನೇ ಇರಲಿ, ಡೇವಿಡ್ ವಾರ್ನರ್ ಅವರನ್ನು ಮೈದಾನದಲ್ಲಿ ಕಾಣಲು ಸಾಧ್ಯವಾಗದಿರುವುದು ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳಿಗೆ ನೋವು ತಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net