

ಕೊಲಂಬೊ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ್ದ ಶ್ರೀಲಂಕಾ ವೇಗದ ಬೌಲರ್ ಶೆಹಾನ್ ಮದುಶಂಕಾ, ಹೆರಾಯಿನ್ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಕ್ರಿಕೆಟಿಗನನ್ನು ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 2018ರಲ್ಲಿ 25 ವರ್ಷದ ಮದುಶಂಕಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2 ಗ್ರಾಮ್‌ನಷ್ಟು ಹೆರಾಯಿನ್ ಇಟ್ಟಿದ್ದ ಮದುಶಂಕಾರನ್ನು ಭಾನುವಾರ ಪನ್ನಾಲಾದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕರೊನಾ ವೈರಸ್ ಲಾಕ್ ಡೌನ್ ವೇಳೆ ತೆರಳುತ್ತಿದ್ದಾಗ ಶೆಹಾನ್ ಮದುಶಂಕಾ ಅವರನ್ನು ಪರಿಶೀಲಿಸಿದಾಗ ಹೆರಾಯಿನ್ ಪತ್ತೆಯಾಗಿದೆ. ಬಲಗೈ ವೇಗದ ಬೌಲರ್ 2018ರ ಜನವರಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪದಾರ್ಪಣೆ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಗಮಸೆಳೆದಿದ್ದರು. ಆ ವರ್ಷವೇ ಬಾಂಗ್ಲಾ ಎದುರು 2 ಟಿ20 ಪಂದ್ಯಗಳನ್ನಾಡಿದ್ದರು. ಬಳಿಕ ಗಾಯದ ಸಮಸ್ಯೆಯಿಂದಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರಲಿಲ್ಲ. ಶ್ರೀಲಂಕಾದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಸಿದ ಆರೋಪದಡಿಯಲ್ಲಿ ಇದುವರೆಗೂ 65 ಸಾವಿರ ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಸಚಿನ್-ಅಂಜಲಿ ದಂಪತಿಯ ಸುವರ್ಣ ನೆನಪಿಗೆ ಬೆಳ್ಳಿ ಸಂಭ್ರಮ