ಮತ್ತೆ ಟ್ರೋಲ್ ಆದ ಪಾಕ್​ ತಂಡ! ಟೆಸ್ಟ್‌ನಲ್ಲಿ ಬಾಂಗ್ಲಾ ವಿರುದ್ಧ ಪ್ರದರ್ಶನ ಹೀಗಿತ್ತು ನೋಡಿ..

pak
Published on

ಇಸ್ಲಾಮಾಬಾದ್​: ಕರಾಚಿಯಲ್ಲಿ ಕಳೆದ ವಾರ ನಡೆದ ಮೊದಲ ಟೆಸ್ಟ್‌ನಲ್ಲಿ 10 ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿದ ನಂತರ ಶಾನ್ ಮಸೂದ್ ನೇತೃತ್ವದ ಪಾಕಿಸ್ತಾನವು ಬಾಂಗ್ಲಾಗೆ ಪಂದ್ಯ ಗೆಲ್ಲಲು ಕೇವಲ 185 ರನ್‌ಗಳ ಗುರಿ ನೀಡಿ ಸರಣಿಯನ್ನು 2-0 ರಿಂದ ಕ್ಲೀನ್ ಸ್ವೀಪ್ ಮಾಡಿತು. ಆದರೆ ಸೋಮವಾರ ರಾವಲ್ಪಿಂಡಿಯಲ್ಲಿ ನಡೆದ ಅಂತಿಮ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 172 ರನ್‌ಗಳಿಗೆ ಆಲೌಟ್ ಆದ ಪಾಕಿಸ್ತಾನ ಕ್ರಿಕೆಟ್ ತಂಡವು ಬಾಂಗ್ಲಾದೇಶ ವಿರುದ್ಧದ ಮೊದಲ ಸ್ವದೇಶಿ ಸರಣಿ ಸೋಲಿನತ್ತ ಸಾಗುತ್ತಿದೆಯೇ ಎಂಬ ಸಂದೇಹ ಅಭಿಮಾನಿಗಳಲ್ಲಿ ಮೂಡಿದೆ.

ಅಂತಿಮ ಟೆಸ್ಟ್​ನ 2 ನೇ ಇನ್ನಿಂಗ್ಸ್​ನಲ್ಲಿ ವಿಕೆಟ್ ಕೀಪರ್ ಮುಹಮ್ಮದ್ ರಿಜ್ವಾನ್ (43), ಅಘಾ ಸಲ್ಮಾನ್ (ಔಟಾಗದೆ 47) ಮಾತ್ರ 40 ರನ್ ಗಡಿ ದಾಟಿದರೆ, ಉಳಿದವರು ಮತ್ತೊಮ್ಮೆ ವಿಫಲರಾದರು. ನಾಯಕ ಶಾನ್ ಮಸೂದ್ 28 ರನ್ ಗಳಿಸಿದರು. ಇನ್ನು ತೀವ್ರ ಟೀಕೆಗೆ ಗುರಿಯಾಗಿರುವ ಬಾಬರ್ ಅಜಮ್ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದರು. ಆತ ಕೇವಲ 11 ರನ್‌ಗಳಿಗೆ ಔಟಾಗಿ ವ್ಯಾಪಕ ಟೀಕೆಗೆ ಗುರಿಯಾದರು.

ಬಾಂಗ್ಲಾದೇಶ ಪರ ಹಸನ್ ಮಹಮೂದ್ 5 ವಿಕೆಟ್ ಪಡೆದರೆ, ನಹಿದ್ ರಾಣಾ 4 ವಿಕೆಟ್ ಪಡೆದರು. ಬಳಿಕ ಬಾಂಗ್ಲಾ ಬ್ಯಾಟಿಂಗ್​ ಶುರು ಮಾಡಿದ್ದು, ಆರಂಭ ಆಟಗಾರ ಜಾಕಿರ್ ಹುಸೇನ್ (27*) ಮತ್ತು ಶಾದ್ಮನ್ ಇಸ್ಲಾಂ (8*) ಸ್ಟ್ರೈಕ್‌ನೊಂದಿಗೆ 4 ನೇ ದಿನದ ಚಹಾದ ಹೊತ್ತಿಗೆ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿದರು. ಬಾಂಗ್ಲಾದ ರನ್ ಚೇಸ್‌ ವೇಗವಾಗಿದ್ದು, ಪಾಕ್​ನ 172 ಗುರಿ ತಲುಪುವುದು ಸುಲಭಸಾಧ್ಯ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಇನ್ನು ಸರಣಿಯನ್ನು ಗೆದ್ದರೆ ಬಾಂಗ್ಲಾದ ಕ್ರಿಕೆಟ್‌ನಲ್ಲಿ ಇದು ದೊಡ್ಡ ಮೈಲಿಗಲ್ಲು ಆಗಲಿದೆ. ಪಾಕಿಸ್ತಾನ ಗೆಲ್ಲದಿದ್ದರೆ ಸಾಕಷ್ಟು ಮುಜುಗರವಾಗುತ್ತದೆ ಎಂಬ ಮಾತುಗಳು ಸಹ ಈಗ ಎಲ್ಲೆಡೆ ಕೇಳಿ ಬರುತ್ತಿವೆ.

ಇನ್ನು ಪಾಕ್​ ಕಳಪೆ ಬ್ಯಾಟಿಂಗ್​ ಮಾಡಿದೆ. ಟೆಸ್ಟ್​ನಲ್ಲಿ ಅದೂ ಸ್ವದೇಶದಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪಾಕಿಸ್ತಾನವನ್ನು ಟ್ರೋಲ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್​ ಮಾಡಲಾಗುತ್ತಿದೆ. ಕಡಿಮೆ ಶ್ರೇಯಾಂಕದ ತಂಡದ ವಿರುದ್ಧ ಸ್ವಂತ ನೆಲದಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ಬೆಂಡೆತ್ತಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net