

ಹಾಂಗ್ರೆೌ: ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ಗಳಂತೆ ಏಷ್ಯಾದ ದೇಶಗಳನ್ನು ಒಗ್ಗೂಡಿಸುವ ಕ್ರೀಡಾಕೂಟ ಏಷ್ಯನ್ ಗೇಮ್ಸ್. ಇದು ಏಷ್ಯಾದ ಅತಿದೊಡ್ಡ ಕ್ರೀಡಾಹಬ್ಬ. ಏಷ್ಯಾಡ್ ಎಂದೇ ಜನಪ್ರಿಯವಾಗಿರುವ ಈ ಕ್ರೀಡಾಕೂಟದ ಪ್ರಥಮ ಆವೃತ್ತಿಯನ್ನು ಆಯೋಜಿಸಿದ ಹೆಮ್ಮೆ ಭಾರತದ್ದು. 19ನೇ ಆವೃತ್ತಿಯ ಏಷ್ಯನ್ ಕ್ರೀಡಾಕೂಟಕ್ಕೆ ಚೀನಾದ ಹಾಂಗ್ರೆೌ ಸಜ್ಜಾಗಿದೆ.
4 ದಿನಗಳ ಹಿಂದೆಯೇ ಕೆಲ ಕ್ರೀಡಾಸ್ಪರ್ಧೆಗಳು ಶುರುವಾಗಿರುವ ನಡುವೆ, ವರ್ಣರಂಜಿತ ಆರಂಭೋತ್ಸವದೊಂದಿಗೆ ಶನಿವಾರ ಅಧಿಕೃತ ಚಾಲನೆ ನೀಡಲಾಗುತ್ತದೆ. ಏಷ್ಯಾದ 45 ದಿನಗಳು, 40 ಕ್ರೀಡೆಗಳಲ್ಲಿ ಸೆಣಸಲಿರುವ ಕ್ರೀಡಾಕೂಟದಲ್ಲಿ ಒಲಿಂಪಿಕ್ಸ್ಗಿಂತಲೂ ಅಧಿಕ ಅಂದರೆ 12 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕರೊನಾದಿಂದಾಗಿ ಒಂದು ವರ್ಷ ತಡವಾಗಿ ಆಯೋಜನೆಗೊಂಡಿರುವ ಕ್ರೀಡೋತ್ಸವದಲ್ಲಿ ಪದಕಗಳ ಶತಕ ಸಿಡಿಸುವ ಹಂಬಲದೊಂದಿಗೆ ಭಾರತ ಈ ಬಾರಿ ಕಣಕ್ಕಿಳಿಯಲಿದೆ.
ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಪತಾಕೆ ಹಾರಿಸುತ್ತಿರುವ ಒಲಿಂಪಿಕ್ಸ್&ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಸಾರಥ್ಯದಲ್ಲಿ ಭಾರತ ತಂಡ, ಕ್ರೀಡಾ ಶಕ್ತಿಕೇಂದ್ರ ಚೀನಾದಲ್ಲಿ ತನ್ನ ಕ್ರೀಡಾ ತಾಕತ್ತು ತೋರುವ ತವಕದಲ್ಲಿದೆ.
ಏಷ್ಯನ್ ಗೇಮ್ಸ್ನಲ್ಲಿ ಮೊದಲ ಬಾರಿಗೆ ಭಾರತದಿಂದ ಗರಿಷ್ಠ ಐವರು ಒಲಿಂಪಿಕ್ಸ್ ಪದಕ ವಿಜೇತರು ಸ್ಪರ್ಧಿಸಲಿದ್ದಾರೆ. ಅವರೆಂದರೆ ಜಾವೆಲಿನ್ ತಾರೆ ನೀರಜ್ ಚೋಪ್ರಾ, ವೇಟ್ಲ್ಟಿರ್ ಮೀರಾಬಾಯಿ ಚಾನು, ಷಟ್ಲರ್ ಪಿವಿ ಸಿಂಧು, ಕುಸ್ತಿಪಟು ಭಜರಂಗ್ ಪೂನಿಯಾ ಮತ್ತು ಬಾಕ್ಸರ್ ಲವ್ಲಿನಾ ಬೋಗೋರ್ಹೈನ್.