

ಕಾನ್ಪುರ: ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಪಿಚ್ ವೇಗದ ಬೌಲರ್ಗಳಿಗೆ ಹೆಚ್ಚಿನ ನೆರವು ಒದಗಿಸಿತು. ಪಂದ್ಯದಲ್ಲಿ ಉರುಳಿದ ಒಟ್ಟು 34 ವಿಕೆಟ್ಗಳಲ್ಲಿ 20 ವಿಕೆಟ್ಗಳು ವೇಗಿಗಳ ಪಾಲಾದವು ಮತ್ತು ಆಟ ನಡೆದ 4 ದಿನವೂ ಕೆಂಪು ಮಣ್ಣಿ ಪಿಚ್ ಉತ್ತಮ ಬೌನ್ಸ್ನಿಂದ ಕೂಡಿತ್ತು. ಆದರೆ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಶುಕ್ರವಾರದಿಂದ ನಡೆಯಲಿರುವ 2ನೇ ಟೆಸ್ಟ್ ಪಂದ್ಯದ ವೇಳೆ ಪಿಚ್ ಸ್ಪಿನ್ ಬೌಲರ್ಗಳಿಗೆ ಹೆಚ್ಚಿನ ನೆರವು ನೀಡುವ ನಿರೀೆ ಇದೆ. ಕಪು$್ಪ ಮಣ್ಣಿನಿಂದ ಸಿದ್ಧಪಡಿಸಲಾಗಿರುವ ಈ ಪಿಚ್ನಲ್ಲಿ ಭಾರತ 3ನೇ ಸ್ಪಿನ್ನರ್ ಕಣಕ್ಕಿಳಿಸುವ ಯೋಜನೆಯಲ್ಲಿದೆ. 3ನೇ ಸ್ಪಿನ್ನರ್ ಸ್ಥಾನ ತುಂಬಲು ಕುಲದೀಪ್ ಯಾದವ್ ಅಥವಾ ಅಕ್ಷರ್ ಪಟೇಲ್ ನಡುವೆ ಪೈಪೋಟಿಯೂ ಏರ್ಪಟ್ಟಿದೆ.
ಗ್ರೀನ್ ಪಾರ್ಕ್ ಪಿಚ್ ಸ್ವಲ್ಪ ಫ್ಲ್ಯಾಟ್ ಆಗಿರಲಿದ್ದು, ಕಡಿಮೆ ಬೌನ್ಸ್ನಿಂದ ಕೂಡಿರಲಿದೆ. ಇದು ಪಂದ್ಯ ಸಾಗಿದಂತೆ ಸ್ಪಿನ್ನರ್ಗಳಿಗೆ ಅಧಿಕ ನೆರವಾಗಲಿದೆ. ಹೀಗಾಗಿ ಕಾನ್ಪುರದಲ್ಲಿ ಭಾರತ ಮತ್ತು ಪ್ರವಾಸಿ ಬಾಂಗ್ಲಾದೇಶಗಳ ತಂಡಗಳ ಆಡುವ 11ರ ಬಳಗದ ಕಾರ್ಯತಂತ್ರವೂ ಬದಲಾಗುವ ನಿರೀೆ ಇದೆ. ಉಭಯ ತಂಡಗಳೂ 3ನೇ ವೇಗಿ ಬದಲಿಗೆ 3ನೇ ಸ್ಪಿನ್ನರ್ ಆಡಿಸುವುದು ಬಹುತೇಕ ನಿಶ್ಚಿತವೆನಿಸಿದೆ.
ಕಾನ್ಪುರದಲ್ಲಿ 2021ರಲ್ಲಿ ಕೊನೇ ಟೆಸ್ಟ್ ಪಂದ್ಯ ನಡೆದಿತ್ತು. ನ್ಯೂಜಿಲೆಂಡ್ ವಿರುದ್ಧದ ಆ ಪಂದ್ಯದಲ್ಲಿ ಭಾರತ ಮೂವರು ಸ್ಪಿನ್ನರ್ಗಳನ್ನು ಆಡಿಸಿತ್ತು. ಡ್ರಾಗೊಂಡಿದ್ದ ಆ ಪಂದ್ಯದಲ್ಲಿ ಆಗ ಅಶ್ವಿನ್, ಜಡೇಜಾ, ಅಕ್ಷರ್ ಕಿವೀಸ್ 19ರಲ್ಲಿ 17 ವಿಕೆಟ್ಗಳನ್ನು ತಮ್ಮಲ್ಲೇ ಹಂಚಿಕೊಂಡಿದ್ದರು.
ಬಾಂಗ್ಲಾಗೆ ಶಕೀಬ್ ಗಾಯದ ಹಿನ್ನಡೆ
ಚೆನ್ನೈ ಟೆಸ್ಟ್ ಪಂದ್ಯದ ವೇಳೆ ಬಲಗೈ ಬೆರಳಿನ ಗಾಯಕ್ಕೊಳಗಾಗಿರುವ ಬಾಂಗ್ಲಾ ಆಲ್ರೌಂಡರ್ ಶಕೀಬ್ ಅಲ್ ಹಸನ್ 2ನೇ ಟೆಸ್ಟ್ನಲ್ಲಿ ಆಡುವ ಬಗ್ಗೆ ಅನುಮಾನವಿದೆ. ಫಿಸಿಯೋ ನೀಡುವ ಅಂತಿಮ ವರದಿಯನ್ನು ಆಧರಿಸಿ ಕಾನ್ಪುರದಲ್ಲಿ ಶಕೀಬ್ರನ್ನು ಆಡಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಬಾಂಗ್ಲಾ ತಂಡದ ಮೂಲಗಳು ತಿಳಿಸಿವೆ. ಚೆನ್ನೆ$ನಲ್ಲಿ ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಕೈಗೆ ಚೆಂಡೇಟು ತಿಂದ ವೇಳೆ ಶಕೀಬ್ ಗಾಯಗೊಂಡಿದ್ದರು. ಶಕೀಬ್ ಆಡದಿದ್ದರೆ, ಸ್ಪಿನ್ ಸ್ನೇಹಿ ಕಾನ್ಪುರ ಪಿಚ್ನಲ್ಲಿ ಬಾಂಗ್ಲಾಗೆ ಭಾರಿ ಹಿನ್ನಡೆ ಎದುರಾಗಲಿದೆ. ವೇಗಿ ನಹಿದ್ ರಾಣಾ ಬದಲಿಗೆ ಬಾಂಗ್ಲಾ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಆಡಿಸಲಿದೆ. ಜತೆಗೆ ಶಕೀಬ್ ಅಲಭ್ಯರಾದರೆ ಆಫ್ ಸ್ಪಿನ್ನರ್ ನಯೀಮ್ ಹಸನ್ ಅವಕಾಶ ಪಡೆಯಬಹುದು.