

ಹಾಂಗ್ರೆೌ: ಏಷ್ಯನ್ ಗೇಮ್ಸ್ನಲ್ಲಿ ಈ ಬಾರಿ ಯುವ-ಅನುಭವಿ ಕ್ರೀಡಾಪಟುಗಳ ನಡುವೆ ಕೆಲ ಅಮ್ಮಂದಿರೂ ಪದಕ ನಿರೀಕ್ಷೆಯಲ್ಲಿದ್ದಾರೆ. ಬಾಕ್ಸರ್ ಮೇರಿ ಕೋಮ್ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಈ ಹಿಂದೆ ಏಷ್ಯಾಡ್ನಲ್ಲಿ ಪದಕ ಗೆದ್ದಿರುವ ಅಮ್ಮಂದಿರಾಗಿದ್ದಾರೆ. ಇದೀಗ ಈ ಪಟ್ಟಿಗೆ ಸೇರ್ಪಡೆಗೊಳ್ಳಲು ಚೆಸ್ ತಾರೆಯರಾದ ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ, ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಮತ್ತು ಶಾಟ್ಪುಟ್ ತಾರೆ ಮನ್ಪ್ರೀತ್ ಕೌರ್ ಸಜ್ಜಾಗಿದ್ದಾರೆ.
ಏಷ್ಯಾಡ್ ನಿಯಮಾವಳಿ ಪ್ರಕಾರ, ಕ್ರೀಡಾಪಟುಗಳು ಮಕ್ಕಳನ್ನು ಕ್ರೀಡಾಗ್ರಾಮಕ್ಕೆ ಕರೆದೊಯ್ಯುವಂತಿಲ್ಲ. ಹೀಗಾಗಿ, ಗ್ರಾಂಡ್ ಮಾಸ್ಟರ್ ಹರಿಕಾ ದ್ರೋಣವಲ್ಲಿ ಒಂದು ವರ್ಷದ ಪುತ್ರಿ ಹನ್ವಿಕಾಳನ್ನು ಮನೆಯಲ್ಲೇ ಬಿಟ್ಟು ಏಷ್ಯಾಡ್ಗೆ ತೆರಳುತ್ತಿದ್ದಾರೆ. ಕಳೆದ ವರ್ಷ ತುಂಬು ಗರ್ಭಿಣಿಯಾಗಿದ್ದಾಗಲೇ ಹರಿಕಾ, ಚೆಸ್ ಒಲಿಂಪಿಯಾಡ್ನಲ್ಲಿ ಸ್ಪರ್ಧಿಸಿ ಕಂಚು ಗೆದ್ದಿದ್ದರು. 15ನೇ ವಯಸ್ಸಿನಲ್ಲೇ ಗ್ರಾಂಡ್ ಮಾಸ್ಟರ್ ಆಗಿದ್ದ ಕೊನೆರು ಹಂಪಿ, 6 ವರ್ಷದ ಪುತ್ರಿ ಅಹನಾಳನ್ನು ಬಿಟ್ಟು ಏಷ್ಯಾಡ್ಗೆ ತೆರಳಲಿದ್ದಾರೆ.
ಇನ್ನು ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪತ್ನಿಯೂ ಆಗಿರುವ ದೀಪಿಕಾ ಪಲ್ಲಿಕಲ್ 2 ವರ್ಷದ ಅವಳಿ ಗಂಡು ಮಕ್ಕಳನ್ನು ಹೊಂದಿದ್ದರೆ, ಉದ್ದೀಪನ ಪ್ರಕರಣದ 4 ವರ್ಷಗಳ ನಿಷೇಧದ ಬಳಿಕ ಮರಳುತ್ತಿರುವ ಮನ್ಪ್ರೀತ್ ಕೌರ್ 11 ವರ್ಷದ ಪುತ್ರಿಯನ್ನು ಹೊಂದಿದ್ದಾರೆ.
ಏಷ್ಯಾಡ್ನಲ್ಲಿ ವಿದಾಯಕ್ಕೆ ಸಜ್ಜಾದವರು
*ರೋಹನ್ ಬೋಪಣ್ಣ (ಟೆನಿಸ್)
*ಅಚಂತ ಶರತ್ ಕಮಲ್ (ಟೇಬಲ್ ಟೆನಿಸ್)
*ಪಿಆರ್ ಶ್ರೀಜೇಶ್ (ಹಾಕಿ)
*ಸುನೀಲ್ ಛೇಟ್ರಿ (ುಟ್ಬಾಲ್)
*ಭಜರಂಗ್ ಪೂನಿಯಾ (ಕುಸ್ತಿ)
*ಸೀಮಾ ಪೂನಿಯಾ (ಡಿಸ್ಕಸ್ ಥ್ರೋ)
ಈ ಸಲದ ಏಷ್ಯಾಡ್ನ ಹೊಸ ತಾರೆಯರು
*ಅಂತಿಮ್ ಪಾಂಗಲ್ (ಕುಸ್ತಿ)
*ಜ್ಯೋತಿ ಯರಾಜಿ (ಅಥ್ಲೆಟಿಕ್ಸ್)
*ಅಮನ್ ಶೆರಾವತ್ (ಕುಸ್ತಿ)
*ಅದಿತಿ ಸ್ವಾಮಿ (ಆರ್ಚರಿ)
*ನಿಖತ್ ಜರೀನ್ (ಬಾಕ್ಸಿಂಗ್)
*ಆರ್ ಪ್ರಜ್ಞಾನಂದ (ಚೆಸ್)
ಈ ಸಲ ಏಷ್ಯಾಡ್ಗೆ ಗೈರಾದ ತಾರೆಯರು
*ಸೈನಾ ನೆಹ್ವಾಲ್ (ಬ್ಯಾಡ್ಮಿಂಟನ್)
*ವಿನೇಶ್ ಪೋಗಟ್ (ಕುಸ್ತಿ)
*ರವಿ ದಹಿಯಾ (ಕುಸ್ತಿ)
*ರಾಣಿ ರಾಂಪಾಲ್ (ಹಾಕಿ)
*ಹಿಮಾ ದಾಸ್ (ಅಥ್ಲೆಟಿಕ್ಸ್)
*ದೀಪಾ ಕರ್ಮಾಕರ್ (ಜಿಮ್ನಾಸ್ಟಿಕ್ಸ್)
*ಏಷ್ಯಾಡ್ನಲ್ಲಿ ಸಹೋದರಿಯರು:
ನಿತ್ಯಾ ರಾಮರಾಜ್ (100 ಮೀ. ಹರ್ಡಲ್ಸ್)
ವಿದ್ಯಾ ರಾಮರಾಜ್ (400 ಮೀ. ಹರ್ಡಲ್ಸ್)