

ನವದೆಹಲಿ: ಟಿ20 ವಿಶ್ವಕಪ್ ವಿಜೇತ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡಕ್ಕೆ ವಿಜಯೋತ್ಸವ ಆಚರಿಸಲು ತನ್ನ ದೇಶಕ್ಕೆ ಬರುವಂತೆ ಮಾಲ್ಡೀವ್ಸ್ನ ಆಹ್ವಾನಿಸಿದೆ. ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕ ನಿಗಮ (ಎಂಎಂಪಿಆರ್ಸಿ) ಮತ್ತು ಮಾಲ್ಡೀವ್ಸ್ ಪ್ರವಾಸೋದ್ಯಮ ಅಸೋಸಿಯೇಷನ್ (ಎಂಎಟಿಐ) ಜತೆಯಾಗಿ ಭಾರತ ತಂಡಕ್ಕೆ ಈ ವಿಶೇಷ ಮತ್ತು ಮುಕ್ತ ಆಹ್ವಾನವನ್ನು ನೀಡಿದೆ.
ಭಾರತ ತಂಡಕ್ಕೆ ಆತಿಥ್ಯ ನೀಡುವುದನ್ನು ನಾವು ಎದುರು ನೋಡುತ್ತಿರುತ್ತೇವೆ. ನಿಮಗೆ ಆತಿಥ್ಯ ನೀಡುವುದು ನಮಗೆ ಗೌರವವಾಗಿದೆ. ನಿಮ್ಮ ವಾಸ್ತವ್ಯದ ವೇಳೆ ಸ್ಮರಣೀಯ ಕ್ಷಣಗಳು, ವಿಶ್ರಾಂತಿ ಮತ್ತು ವಿಶೇಷ ಅನುಭವಗಳನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮ ಗೆಲುವಿನ ಸಂಭ್ರಮದಲ್ಲಿ ನಾವೂ ಭಾಗವಹಿಸಲು ಬಯಸುತ್ತೇವೆ ಎಂದು ಎಂಎಂಪಿಆರ್ಸಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಇಬ್ರಾಹಿಂ ಶಿಯುರೀ ಹೇಳಿದ್ದಾರೆ.