ಜಿಯೋಸಿನಿಮಾದಲ್ಲಿ ಪ್ಯಾರಿಸ್ ಒಲಿಂಪಿಕ್ಸ್-2024 ಸಂಪೂರ್ಣ ಉಚಿತವಾಗಿ ನೇರಪ್ರಸಾರ

web oly jio
Published on

ಮುಂಬೈ: ಪ್ಯಾರಿಸ್ ಒಲಿಂಪಿಕ್ಸ್-2024ರ ಅಧಿಕೃತ ಪ್ರಸಾರ ಮತ್ತು ಡಿಜಿಟಲ್ ಪಾಲುದಾರನಾಗಿರುವ ವಯಾಕಾಮ್18, ಭಾರತದಲ್ಲಿ 20 ಏಕಕಾಲಿಕ ಫೀಡ್‌ಗಳು ಮತ್ತು ಒಲಿಂಪಿಯನ್‌ಗಳ ಬಳಗದೊಂದಿಗೆ ಅತಿ ದೊಡ್ಡ ಮತ್ತು ಸಮಗ್ರ ಒಲಿಂಪಿಕ್ಸ್ ಪ್ರಸ್ತುತಿಯನ್ನು ಘೋಷಿಸುತ್ತಿದೆ. ಜುಲೈ 26ರಂದು ಆರಂಭವಾಗಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಎಲ್ಲ ಕ್ರೀಡಾಸ್ಪರ್ಧೆಗಳನ್ನು ಸ್ಪೋರ್ಟ್ಸ್ 18 ನೆಟ್ವರ್ಕ್ನಲ್ಲಿ ನೇರಪ್ರಸಾರ ಮಾಡಲಿದೆ. ಇದೇ ವೇಳೆ ಜಿಯೋಸಿನಿಮಾದಲ್ಲಿ ಉಚಿತವಾಗಿ ನೇರಪ್ರಸಾರ ಮಾಡಲಿದೆ. ಇದುವರೆಗಿನ ಅತ್ಯಂತ ಸಮಗ್ರವಾದ ಒಲಿಂಪಿಕ್ಸ್ ಪ್ರಸ್ತುತಿಯನ್ನು ವರ್ಧಿಸಲು ಬಹು ಕ್ರೀಡಾ ವಿಭಾಗಗಳಲ್ಲಿ ಮಾಜಿ ಚಾಂಪಿಯನ್‌ಗಳು ಹಾಜರಿರಲಿದ್ದಾರೆ. ' ದಮ್ ಲಗಾ ಕೆ... ಹೈಶಾ ' ಪ್ರಚಾರ ವಿಡಿಯೋದ ಮೂಲಕ ಹಿಂದೆಂದೂ ಕಂಡಿರದ ಒಲಿಂಪಿಕ್ಸ್‌ನ ಭರವಸೆಯನ್ನು ನೀಡುವ ಅಭಿಯಾನವನ್ನೂ ಆರಂಭಿಸಲಾಗಿದೆ.

ಮೊದಲ ಬಾರಿಗೆ ಭಾರತದಲ್ಲಿ ಒಲಿಂಪಿಕ್ಸ್ ಕವರೇಜ್ ಅನ್ನು ಜಿಯೋಸಿನಿಮಾದಲ್ಲಿ 20 ಏಕಕಾಲೀನ ಫೀಡ್‌ಗಳಲ್ಲಿ ಉಚಿತವಾಗಿ ಪ್ರಸ್ತುತಪಡಿಸಲಾಗುತ್ತದೆ. ಅಭಿಮಾನಿಗಳು ತಮ್ಮ ಆದ್ಯತೆಯ ಸ್ಪರ್ಧೆ ಮತ್ತು ಭಾರತೀಯರ ಪ್ರದರ್ಶನಗಳನ್ನು ತಮ್ಮ ಆದ್ಯತೆಯ ಆಧಾರದಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತದೆ. ಪ್ರಸ್ತುತಿಯು 17 ಕ್ರೀಡಾವಾರು ಫೀಡ್‌ಗಳನ್ನು ಮತ್ತು ಮೂರು ಕ್ಯುರೇಟೆಡ್ ಫೀಡ್‌ಗಳನ್ನು ಹೊಂದಿರುತ್ತದೆ. ಎಲ್ಲವೂ 4ಕೆನಲ್ಲಿ ಲಭ್ಯವಿದೆ. ಕ್ಯುರೇಟೆಡ್ ಫೀಡ್‌ಗಳು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ವೀಕ್ಷಕವಿವರಣೆಯೊಂದಿಗೆ ಭಾರತೀಯ ಫೀಡ್ಗಳನ್ನು ಒಳಗೊಂಡಿರುತ್ತವೆ.

ಹಿಂದೆಂದೂ ನೋಡಿರದ ಪ್ರಯತ್ನದಲ್ಲಿ, ಮಹಿಳಾ ಕ್ರೀಡಾಪಟುಗಳ ಫೀಡ್ ಸಂಪೂರ್ಣ ಕ್ರೀಡಾಕೂಟದಲ್ಲಿ ಮಹಿಳಾ ಒಲಿಂಪಿಯನ್‌ಗಳ ಪ್ರಯಾಣವನ್ನು ಪ್ರತ್ಯೇಕವಾಗಿ ಸೆರೆಹಿಡಿಯುತ್ತದೆ. ಕ್ಯುರೇಟೆಡ್ ಫೀಡ್‌ಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಜಾಗತಿಕ ಕ್ರೀಡಾಸ್ಪರ್ಧೆಗಳ ಫೀಡ್ಗಳನ್ನು ಸಹ ಒಳಗೊಂಡಿರುತ್ತವೆ. ಇದರಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್-2024ರಲ್ಲಿ ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳ ಸ್ಪರ್ಧೆಗಳನ್ನು ಹಿಂಬಾಲಿಸಲು ವೀಕ್ಷಕರಿಗೆ ಅವಕಾಶ ನೀಡುತ್ತದೆ.

ಸ್ಪೋರ್ಟ್ಸ್18-1, ಸ್ಪೋರ್ಟ್ಸ್18--1ಎಚ್ಡಿ, ಸ್ಪೋರ್ಟ್ಸ್18-2 ಚಾನಲ್ಗಳು ಭಾರತ ಕೇಂದ್ರೀಕೃತ ಸ್ಪರ್ಧೆಗಳನ್ನು ನೇರಪ್ರಸಾರ ಮಾಡುತ್ತವೆ. ಸ್ಪೋರ್ಟ್ಸ್18-3ರಲ್ಲಿ ಜಾಗತಿಕ ಕ್ರೀಡಾತಾರೆಯರ ಸ್ಪರ್ಧೆಗಳು ನೇರಪ್ರಸಾರ ಕಾಣಲಿವೆ. ಸ್ಪೋರ್ಟ್ಸ್18-1 ಮತ್ತು ಸ್ಪೋರ್ಟ್ಸ್18-1ಎಚ್ಡಿ ಚಾನಲ್ಗಳು ತಮಿಳು ಮತ್ತು ತೆಲುಗು ಜತೆಗೆ ಇಂಗ್ಲಿಷ್ನಲ್ಲಿ ಸ್ಪರ್ಧೆಗಳನ್ನು ನೇರಪ್ರಸಾರ ಮಾಡಲಿವೆ. ಭಾಷೆಗಳ ಆಯ್ಕೆಯ ಬಟನ್ಗಳೂ ಲಭ್ಯವಿರಲಿವೆ. ಸ್ಪೋರ್ಟ್ಸ್18-2ರಲ್ಲಿ ಹಿಂದಿ ವೀಕ್ಷಕವಿವರಣೆಯೊಂದಿಗೆ ಸ್ಪರ್ಧೆಗಳು ನೇರಪ್ರಸಾರ ಕಾಣಲಿವೆ.

ಭಾರತೀಯರ ಮೇಲೆ ಮೀಸಲಾದ ಕ್ಯಾಮರಾ ಫೀಡ್‌ನೊಂದಿಗೆ ಉದ್ಘಾಟನಾ ಸಮಾರಂಭದ ಕವರೇಜ್ ನೀಡಲಾಗುತ್ತದೆ. ಈ ಮೂಲಕ ಭಾರತೀಯ ತಂಡದ ಸಂಪೂರ್ಣ ನೋಟವನ್ನು ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಭಾರತೀಯರ ಪದಕ ಗೆಲುವಿನ ಕ್ಷಣಗಳಲ್ಲಿ ಅವರ ಕುಟುಂಬದ ಸದಸ್ಯರ ನೇರ ಸಂದರ್ಶನದೊಂದಿಗೆ ಸ್ಟುಡಿಯೋದಲ್ಲಿರುವ ಕ್ರೀಡಾತಜ್ಞರ ಕವರೇಜ್ಗಳನ್ನು ವೀಕ್ಷಕರು ಆನಂದಿಸಲು ಸಾಧ್ಯವಾಗುತ್ತದೆ.

'ನಮ್ಮ ಕ್ರೀಡಾಪಟುಗಳು ಉನ್ನತ ಸಾಧನೆಯ ಮೇಲೆ ಕಣ್ಣಿಟ್ಟಿರುವ ಸಮಯದಲ್ಲಿ ವೀಕ್ಷಕರನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ಪ್ಯಾರಿಸ್ ಒಲಿಂಪಿಕ್ಸ್-2024ರ ನಮ್ಮ ಪ್ರಸ್ತುತಿಯನ್ನು ರೂಪಿಸಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಪ್ರಸ್ತುತಿಯು ಭಾರತೀಯರಿಗೆ ಮೀಸಲಾದ ಫೀಡ್, ಮಹಿಳಾ ಕ್ರೀಡಾಪಟುಗಳ ಫೀಡ್ ಮತ್ತು ಜಾಗತಿಕ ಕ್ರೀಡಾಸ್ಪರ್ಧೆಗಳ ಫೀಡ್ಗಳನ್ನು ಹೊಂದಿರುತ್ತದೆ. ಇದು ಕ್ರೀಡಾಕೂಟವನ್ನು ವೀಕ್ಷಿಸುವಾಗ ಅಭಿಮಾನಿಗಳಿಗೆ ನೇರ ಅನುಭವದೊಂದಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡುತ್ತದೆ' ಎಂದು ವಯಾಕಾಮ್18-ಸ್ಪೋರ್ಟ್ಸ್ ಕಂಟೆಂಟ್ ಮುಖ್ಯಸ್ಥ ಸಿದ್ಧಾರ್ಥ್ ಶರ್ಮ ಹೇಳಿದ್ದಾರೆ.

ಭಾರತದ ಮೊದಲ ಮಹಿಳಾ ಕುಸ್ತಿ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ (2016ರ ರಿಯೋ ಒಲಿಂಪಿಕ್ಸ್), 2008ರ ಬೀಜಿಂಗ್ ಒಲಿಂಪಿಕ್ ಕಂಚಿನ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರೊಂದಿಗೆ ನಾಲ್ಕು ಬಾರಿಯ ಒಲಿಂಪಿಯನ್ ಮತ್ತು ಆರು ಬಾರಿಯ ಗ್ರ್ಯಾಂಡ್ ಸ್ಲಾಮ್ ವಿಜೇತೆ ಮತ್ತು ಡಬ್ಲ್ಯುಟಿಎ ಶ್ರೇಯಾಂಕದಲ್ಲಿ ವಿಶ್ವ ನಂಬರ್ ಒನ್ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಎನಿಸಿರುವ ಸಾನಿಯಾ ಮಿರ್ಜಾ, ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೋಮದೇವ್ ದೇವವರ್ಮನ್, ವಿಶ್ವದ ನಂ. 7 ಲಾಂಗ್ ಜಂಪರ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತ ಮುರಳಿ ಶ್ರೀಶಂಕರ್ ಅವರು ಒಲಿಂಪಿಕ್ಸ್ ಸಮಯದಲ್ಲಿ ವಯಾಕಾಮ್18ರಲ್ಲಿ ಕ್ರೀಡಾ ಪರಿಣತರಾಗಿ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ಟುಡಿಯೋ ಲೈನ್‌ಅಪ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡದ ಮಾಜಿ ನಾಯಕ ವೀರೇನ್ ರಸ್ಕ್ವಿನ್ಹಾ, ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಷಟ್ಲರ್ ಪಾರುಪಳ್ಳಿ ಕಶ್ಯಪ್, ಅನೇಕ ಏಷ್ಯನ್ ಗೇಮ್ಸ್ ಪದಕ ವಿಜೇತ ಮತ್ತು ವಿಶ್ವ ಡಬಲ್ಸ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತ ಸ್ಕ್ವಾಷ್ ಆಟಗಾರ ಸೌರವ್ ಘೋಷಾಲ್ ಮತ್ತು ಎರಡು ಬಾರಿಯ ಒಲಿಂಪಿಯನ್ ಆರ್ಚರ್ ಅತನು ದಾಸ್ ವಯಾಕಾಮ್18ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

' ದಮ್ ಲಗಾ ಕೆ... ಹೈಶಾ ' ಅಭಿಯಾನವು ಒಲಿಂಪಿಕ್ಸ್ ಸ್ಫೂರ್ತಿಯ ದ್ಯೋತಕವಾಗಿದೆ ಮತ್ತು ಒಲಿಂಪಿಕ್ಸ್ ಅನ್ನು ವಿವೇಚನಾಶೀಲವಾಗಿ ವೀಕ್ಷಿಸುವ ಜಗತ್ತನ್ನು ಕಲ್ಪಿಸುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಓಟಗಾರರು, ಬಾಕ್ಸರ್‌ಗಳು, ಜಿಮ್ನಾಸ್ಟ್‌ಗಳು, ಬಿಲ್ಲುಗಾರರು ಮತ್ತು ವೇಟ್‌ಲಿಫ್ಟರ್‌ಗಳಂತೆ ನಮ್ಮನ್ನು ಹುರಿದುಂಬಿಸಲು ಪ್ರೇರೇಪಿಸುತ್ತದೆ. ದಮ್ ಲಗಾ ಕೆ... ಹೈಶಾ ಅಭಿಯಾನವು ದೇಶಾದ್ಯಂತ ಒಲಿಂಪಿಕ್ಸ್‌ಗಾಗಿ ಭಾರತೀಯರ ಉತ್ಸಾಹವನ್ನು ಹರಡಿದೆ. ನಮ್ಮ ಪರಿಕಲ್ಪನೆಯನ್ನು ಜೀವಂತಗೊಳಿಸಲು ನಾವು ಜುಗಾಡ್ ಮೋಷನ್ ಪಿಕ್ಚರ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. ಅವರು ಹೊಸ ವಿಧಾನವನ್ನು ತಂದರು ಮತ್ತು ಪರಿಕಲ್ಪನೆಯನ್ನು ಶ್ರೀಮಂತ ಶ್ರವ್ಯ-ದೃಶ್ಯ ಅನುಭವಕ್ಕೆ ಹೆಚ್ಚಿಸಿದ್ದೇವೆ' ಎಂದು ಜಿಯೋಸಿನಿಮಾದ ಬ್ರಾಂಡ್ ಮತ್ತು ಕ್ರಿಯೇಟಿವ್ ಮಾರ್ಕೆಟಿಂಗ್ ಮುಖ್ಯಸ್ಥ ಶಗುನ್ ಸೇಡಾ ಹೇಳಿದ್ದಾರೆ.

ವಯಾಕಾಮ್18ನ ಪ್ಯಾರಿಸ್ ಒಲಿಂಪಿಕ್ಸ್-2024ರ ಸಮಗ್ರ ಕವರೇಜ್ ಭಾರತದ ಅಭಿಮಾನಿಗಳು, ಒಲಿಂಪಿಕ್ಸ್‌ನಲ್ಲಿ ನೋಡಲೇಬೇಕಾದ ಘಟನೆಗಳು, ಒಲಿಂಪಿಕ್ಸ್ ಇತಿಹಾಸದ ಶ್ರೇಷ್ಠ ಪ್ರದರ್ಶನಗಳು, ಭಾರತೀಯರು ಸಾಧಿಸಬಹುದಾದ ಅಭೂತಪೂರ್ವ ಸಾಧನೆಯ ಹೆಗ್ಗುರುತುಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರಲಿದೆ.

ಪ್ಯಾರಿಸ್ ಒಲಿಂಪಿಕ್ಸ್-2024ಕ್ಕಾಗಿ ವಯಾಕಾಮ್18ನ ತಜ್ಞರ ಸಂಪೂರ್ಣ ಪಟ್ಟಿ ಇಲ್ಲಿದೆ:

ಸಾನಿಯಾ ಮಿರ್ಜಾ, ವೀರೇನ್ ರಸ್ಕ್ವಿನ್ಹಾ, ಸೋಮದೇವ್ ದೇವವರ್ಮನ್, ನೇಹಾ ಅಗರ್ವಾಲ್, ನಿಶಾ ಮಿಲ್ಲೆಟ್, ಮುರಳಿ ಶ್ರೀಶಂಕರ್, ಸೌರವ್ ಘೋಷಾಲ್, ರಾಹುಲ್ ಬ್ಯಾನರ್ಜಿ, ಅತನು ದಾಸ್, ಪಿ. ಕಶ್ಯಪ್, ವಿಜೇಂದರ್ ಸಿಂಗ್, ಜುಗ್ರಾಜ್ ಸಿಂಗ್, ಹೀನಾ ಸಿಧು, ಜಾಯ್ದೀಪ್ ಕರ್ಮಾಕರ್, ವೀರ್ಧವಳ್ ಖಾಡೆ, ಸಾಕ್ಷಿ ಮಲಿಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net