ದಕ್ಷಿಣ ಏಷ್ಯಾ ಜೂ. ಅಥ್ಲೆಟಿಕ್ಸ್​ನಲ್ಲಿ ರಾಜ್ಯದ ಸುಧೀಕ್ಷಾಗೆ ಬೆಳ್ಳಿ, ಬೋಪಣ್ಣಗೆ ಕಂಚು

WEB ATH
Published on

ಬೆಂಗಳೂರು: ಕರ್ನಾಟಕದ ಸುಧೀಕ್ಷಾ ವಿ. ಮತ್ತು ಬೋಪಣ್ಣ ಕ್ಲಪ್ಪ ಚೆನ್ನೈನಲ್ಲಿ ಬುಧವಾರ ಆರಂಭಗೊಂಡ ದಣ ಏಷ್ಯಾ ಜೂನಿಯರ್​ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಸುಧೀಕ್ಷಾ ಮಹಿಳೆಯರ 100 ಮೀ. ಓಟದಲ್ಲಿ 11.92 ಸೆಕೆಂಡ್​ಗಳಲ್ಲಿ ಓಡಿ ರಜತಕ್ಕೆ ಕೊರಳೊಡ್ಡಿದರು. ಬೋಪಣ್ಣ ಪುರುಷರ 800 ಮೀ. ಓಟದಲ್ಲಿ 1 ನಿಮಿಷ, 50.45 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ 3ನೇ ಸ್ಥಾನ ಪಡೆದರು. ಕೂಟದ ಮೊದಲ ದಿನ ಭಾರತ 3 ಚಿನ್ನ, 3 ಬೆಳ್ಳಿ, 2 ಕಂಚು ಜಯಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net