

ದುಬೈ: ಹಾಲಿ ಹಾಗೂ ಆರು ಬಾರಿಯ ಚಾಂಪಿಯನ್ ಆಸ್ಟ್ರೆಲಿಯಾ ತಂಡಕ್ಕೆ 8 ವಿಕೆಟ್ಗಳಿಂದ ಸೋಲುಣಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಮಹಿಳಾ ಟಿ20 ವಿಶ್ವಕಪ್ನಲ್ಲಿ ಸತತ 2ನೇ ಬಾರಿಗೆ ಫೈನಲ್ಗೇರಿದೆ. ಈ ಮೂಲಕ ಕಳೆದ ಆವೃತ್ತಿಯ ಪ್ರಶಸ್ತಿ ಹೋರಾಟದಲ್ಲಿ ಆಸೀಸ್ ಎದುರು ಅನುಭವಿಸಿದ್ದ ಸೋಲಿಗೆ ದ. ಆಫ್ರಿಕಾ ಸೇಡು ತೀರಿಸಿಕೊಂಡಿದೆ. ಜತೆಗೆ ಹಾಲಿ ವರ್ಷ ಪುರುಷರ ಟಿ20 ವಿಶ್ವಕಪ್ ನಂತರ ಮಹಿಳಾ ವಿಶ್ವಕಪ್ನಲ್ಲೂ ಫೈನಲ್ಗೇರುವ ಮೂಲಕ ದಕ್ಷಿಣ ಆಫ್ರಿಕಾ ವಿಶೇಷ ಸಾಧನೆ ಮೆರೆದಿದೆ.
ಗುರುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಸೀಸ್ ಆರಂಭಿಕ ಆಘಾತ ಕಂಡರೂ, ವಿಕೆಟ್ ಕೀಪರ್-ಬ್ಯಾಟರ್ ಬೆಥ್ ಮೂನಿ (44), ಹಂಗಾಮಿ ನಾಯಕಿ ತಾಹ್ಲಿಯಾ ಮೆಕ್ಗ್ರಾತ್ (27), ಎಲ್ಲಿಸ್ ಪೆರ್ರಿ (31*) ಆಸರೆಯಲ್ಲಿ 5 ವಿಕೆಟ್ಗೆ 134 ರನ್ ಪೇರಿಸಿತು. ಪ್ರತಿಯಾಗಿ ನಾಯಕಿ ಲೌರಾ ವೊಲ್ವಾರ್ಡ್ (42) ಮತ್ತು ಅನ್ನೆಕ್ ಬಾಷ್ (74*) ಹೋರಾಟದಿಂದ 17.2 ಓವರ್ಗಳಲ್ಲಿ 2 ವಿಕೆಟ್ಗೆ 135 ರನ್ ಗಳಿಸಿ ಜಯಿಸಿತು.
ಆಸ್ಟ್ರೆಲಿಯಾ: 5 ವಿಕೆಟ್ಗೆ 134 (ಮೂನಿ 44, ಜಾರ್ಜಿಯಾ 5, ತಾಹ್ಲಿಯಾ 27,ಎಲ್ಲಿಸ್ ಪೆರ್ರಿ 31*, ಲಿಚ್ಫೀಲ್ಡ್ 16*, ಖಾಕ 24ಕ್ಕ 2, ಕಾಪ್ 24ಕ್ಕೆ 1). ದ. ಆಫ್ರಿಕಾ: 17.2 ಓವರ್ಗಳಲ್ಲಿ 2 ವಿಕೆಟ್ಗೆ 135 (ಲೌರಾ 42, ಬಾಷ್ 74*, ಸದರ್ಲ್ಯಾಂಡ್ 26ಕ್ಕೆ 2).
ಶುಕ್ರವಾರದ ಸೆಮಿಫೈನಲ್
ನ್ಯೂಜಿಲೆಂಡ್-ವೆಸ್ಟ್ ಇಂಡೀಸ್
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್