ಶಾಲೆ ನಿರ್ಮಾಣಕ್ಕಾಗಿ ಟಿಎಂಸಿ ಸರ್ಕಾರ ನೀಡಿದ 2 ಎಕರೆ ಜಮೀನು ವಾಪಸ್​ ನೀಡಿದ ದಾದಾ...!

sourav and mamatha for web
Published on

ಕೋಲ್ಕತ: ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್​ ಗಂಗೂಲಿ ಅವರಿಗೆ ಐಸಿಎಸ್​ಇ ಶಾಲೆ ನಿರ್ಮಾಣಕ್ಕಾಗಿ ಟಿಎಂಸಿ ಸರ್ಕಾರ ನೀಡಿದ್ದ ಭೂಮಿಯನ್ನು ವಾಪಸ್​ ನೀಡಿದ್ದಾರೆ. ಕೋಲ್ಕತದ ಈಶಾನ್ಯ ಭಾಗದ ನ್ಯೂಟೌನ್​ನಲ್ಲಿ ಗಂಗೂಲಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಶಾಲೆ ನಿರ್ಮಾಣಕ್ಕೆ 2 ಎಕರೆ ಜಮೀನು ನೀಡಿತ್ತು. ಖುದ್ದು ಗಂಗೂಲಿ ಅವರೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಜಮೀನಿಗೆ ಸಂಬಂಧಪಟ್ಟ ಪತ್ರಗಳನ್ನು ವಾಪಸ್​ ನೀಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಕಳೆದ ತಿಂಗಳೇ ದಾದಾ, ಸಿಎಂ ಮಮತಾ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಇದೀಗ ಜಮೀನು ವಾಪಸ್​ ನೀಡಿರುವುದರಿಂದ ಗಂಗೂಲಿ, ಸಿಎಂ ಮಮತಾ ಅವರೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ವದಂತಿಗೆ ಪುಷ್ಠಿ ನೀಡಿದೆ.

ಮುಖ್ಯಮಂತ್ರಿಗಳನ್ನು ಕೇವಲ ಸ್ನೇಹಪೂರ್ವಕವಾಗಿ ಗಂಗೂಲಿ ಭೇಟಿಯಾಗಿದ್ದರು ಎಂದಷ್ಟೇ ಹೇಳಲಾಗಿದ್ದು, ಗಂಗೂಲಿ ಅಥವಾ ರಾಜ್ಯ ಸರ್ಕಾರವಾಗಲಿ ಅಧಿಕೃತವಾಗಿ ಈ ಕುರಿತು ಹೇಳಿಕೊಂಡಿಲ್ಲ. ಭೂಮಿ ಕುರಿತು ಕೆಲವೊಂದು ಕಾನೂನು ತೊಡಕುಗಳನ್ನು ಇದ್ದ ಕಾರಣ ಗಂಗೂಲಿ ಸರ್ಕಾರಕ್ಕೆ ವಾಪಸ್​ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಮುನ್ನ ಎಡರಂಗ ಸರ್ಕಾರವಿದ್ದಾಗಲೂ ಗಂಗೂಲಿಗೆ ಎಕರೆ ಜಮೀನು ನೀಡಲಾಗಿತ್ತು. ಆದರೆ, ಅದಕ್ಕೂ ಕಾನೂನು ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಗಂಗೂಲಿ ಸರ್ಕಾರಕ್ಕೆ ಜಮೀನು ನೀಡಿದ್ದರು.

ಗಂಗೂಲಿ, ಸ್ಥಳಿಯ ಸರ್ಕಾರದಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, 2021ರ ವಿಧಾನಸಭೆ ಚುನಾವಣೆಗೆ ಗಂಗೂಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಆದರೆ,ಗಂಗೂಲಿ ರಾಜಕೀಯ ಸೇರ್ಪಡೆ ಕುರಿತು ಹರಡಿರುವ ವದಂತಿಗಳಿಗೆ ಈಗಾಗಲೇ ತೆರೆ ಎಳೆದಿದ್ದಾರೆ. ಕೇಂದ್ರ ಸರ್ಕಾರದ ಸಚಿವರೊಬ್ಬರ ಸಹಾಯದಿಂದಲೇ ಗಂಗೂಲಿ ಬಿಸಿಸಿಐ ಅಧ್ಯಕ್ಷ ಗಾದಿಗೇರಿದ್ದರು ಎಂದು ಮಾತುಗಳು ಕೇಳಿಬಂದಿದ್ದವು. 2019ರ ಅಕ್ಟೋಬರ್​ನಲ್ಲಿ ನಡೆದ ಬಿಸಿಸಿಐ ಚುನಾವಣೆಯಲ್ಲಿ ಗಂಗೂಲಿ ಅಧ್ಯಕ್ಷರಾದರೆ, ಗೃಹ ಸಚಿವ ಅಮಿತ್​ ಷಾ ಪುತ್ರ ಜಯ್​ ಷಾ ಕಾರ್ಯದಶಿರ್ಯಾಗಿ ಆಯ್ಕೆಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net