ಪ್ರೊ ಕಬಡ್ಡಿ ಲೀಗ್​ನಲ್ಲಿ ಗುಜರಾತ್ ಜೈಂಟ್ಸ್​​​ಗೆ ಹ್ಯಾಟ್ರಿಕ್​ ಗೆಲುವು

gg pkl web
Published on

ಅಹಮದಾಬಾದ್​: ಆತಿಥೇಯ ಗುಜರಾತ್​ ಜೈಂಟ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್​ ಗೆಲುವಿನ ಸಂಭ್ರಮ ಕಂಡಿದೆ. ಗುಜರಾತ್​ ತಂಡ ಮಂಗಳವಾರ ನಡೆದ ತನ್ನ 3ನೇ ಲೀಗ್​ ಪಂದ್ಯದಲ್ಲಿ ಯು ಮುಂಬಾ ವಿರುದ್ಧ 39-37 ಅಂಕಗಳಿಂದ ಗೆಲುವು ದಾಖಲಿಸಿತು.

ಟ್ರಾನ್ಸ್​ಸ್ಟಡಿಯಾದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಚರಣದ ಪಂದ್ಯದಲ್ಲಿ ರೈಡರ್​ಗಳಾದ ಸೋನು (11), ರಾಕೇಶ್​ (9) ಮತ್ತು ಆಲ್ರೌಂಡರ್​ ರೋಹಿತ್​ ಗುಲಿಯಾ (7) ಭರ್ಜರಿ ನಿರ್ವಹಣೆಯ ಬಲದಿಂದ ಗುಜರಾತ್​ ತಂಡ ಗೆಲುವಿನ ಓಟ ಮುಂದುವರಿಸಿತು.

ಮೊದಲಾರ್ಧದಲ್ಲಿ 16&18ರಿಂದ ಹಿನ್ನಡೆಯಲ್ಲಿದ್ದ ಗುಜರಾತ್​ ದ್ವೀತಿಯಾರ್ಧದಲ್ಲಿ ತಿರುಗೇಟು ನೀಡಿತು. ಮುಂಬಾ ಪರ ಗುಮನ್​ ಸಿಂಗ್​ (10), ಆಮಿರ್​ ಮೊಹಮದ್​ ಝರ್ದನೇಶ್​ (10) ಹೋರಾಟ ವ್ಯರ್ಥವೆನಿಸಿತು. ಗುಜರಾತ್​ ತವರು ಚರಣದ ಮೊದಲೆರಡು ಪಂದ್ಯಗಳಲ್ಲಿ ತೆಲುಗು ಟೈಟಾನ್ಸ್​ ಮತ್ತು ಬೆಂಗಳೂರು ಬುಲ್ಸ್​ ಎದುರು ಗೆದ್ದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net