ಲಂಕಾ ಪ್ರೀಮಿಯರ್​ ಲೀಗ್​ ತಂಡಗಳಿಗೆ ಐಪಿಎಲ್​ ತಂಡಗಳ ಹೆಸರು!

ipl lpl
Published on

ಕೊಲಂಬೊ: ಭಾರತದ ಶ್ರೀಮಂತ ಕ್ರಿಕೆಟ್​ ಟೂರ್ನಿ ಐಪಿಎಲ್​ ವಿಶ್ವದ ಹಲವು ದೇಶಗಳ ಟಿ20 ಲೀಗ್​ಗಳಿಗೆ ಸ್ಫೂರ್ತಿಯಾಗಿವೆ. ಆಸ್ಟ್ರೇಲಿಯಾ, ವೆಸ್ಟ್​ ಇಂಡೀಸ್​, ದಕ್ಷಿಣ ಆಫ್ರಿಕಾಗಳಲ್ಲಿ ಈಗಾಗಲೆ ಐಪಿಎಲ್​ ಮಾದರಿಯ ಟಿ20 ಲೀಗ್​ಗಳು ಉತ್ತಮ ಯಶಸ್ಸು ಕಂಡಿವೆ. ಇದೀಗ ಶ್ರೀಲಂಕಾದಲ್ಲಿ ಲಂಕಾ ಪ್ರೀಮಿಯರ್​ ಲೀಗ್​ (ಎಲ್​ಪಿಎಲ್​) ಟಿ20 ಟೂರ್ನಿಗೂ ಐಪಿಎಲ್​ ಸ್ಫೂರ್ತಿಯಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಎಲ್​ಪಿಎಲ್​ನಲ್ಲಿ ಆಡುವ ತಂಡಗಳ ಹೆಸರು ಕೂಡ ಬಹುತೇಕ ಐಪಿಎಲ್​ ತಂಡಗಳ ಜತೆಗೆ ಹೋಲಿಕೆ ಹೊಂದಿವೆ!

ಆಗಸ್ಟ್​ 28ರಿಂದ ಸೆಪ್ಟೆಂಬರ್​ 20ರವರೆಗೆ ಎಲ್​ಪಿಎಲ್​ ಟೂರ್ನಿ ನಿಗದಿಯಾಗಿದೆ. ಇದರಲ್ಲಿ 5 ತಂಡಗಳು ಕಣಕ್ಕಿಳಿಯಲಿವೆ. ಅವುಗಳೆಂದರೆ ಕೊಲಂಬೊ ಸೂಪರ್​ಕಿಂಗ್ಸ್​, ಗಾಲೆ ಲಯನ್ಸ್​, ಕ್ಯಾಂಡಿ ರಾಯಲ್ಸ್​, ಜಫ್ನಾ ಸನ್​ರೈಸಸ್​ ಮತ್ತು ಡಂಬುಲಾ ಕ್ಯಾಪಿಟಲ್ಸ್​. ಈ ಹೆಸರುಗಳು ಐಪಿಎಲ್​ನ ಚೆನ್ನೈ ಸೂಪರ್​ಕಿಂಗ್ಸ್​, ರಾಜಸ್ಥಾನ ರಾಯಲ್ಸ್, ಹೈದರಾಬಾದ್​ ಸನ್​ರೈಸರ್ಸ್​, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಈ ಹಿಂದಿನ ಗುಜರಾತ್​ ಲಯನ್ಸ್​ ತಂಡಗಳ ಹೆಸರುಗಳನ್ನು ನೆನಪಿಸುತ್ತಿವೆ.

ಎಲ್​ಪಿಎಲ್​ನಲ್ಲಿ ತಂಡಗಳ ಹೆಸರಿನಲ್ಲೂ ಐಪಿಎಲ್​ ಟೂರ್ನಿಯನ್ನು ಕಾಪಿ ಮಾಡಿರುವುದಕ್ಕೆ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್​ಗಳಿಗೂ ಒಳಗಾಗಿದೆ. ಎಲ್​ಪಿಎಲ್​ನಲ್ಲಿ ತಂಡಗಳಿಗೆ ಹೆಸರು ನೀಡುವಲ್ಲೂ ಸ್ವಂತ ಬುದ್ದಿವಂತಿಕೆ ಉಪಯೋಗಿಸದಿರುವುದಕ್ಕೆ ಲಂಕಾ ಕ್ರಿಕೆಟ್​ ಮಂಡಳಿಯ ಕಾಲೆಳೆಯಲಾಗುತ್ತಿದೆ. ಶ್ರೀಲಂಕಾ ಕ್ರಿಕೆಟ್​ ಅಷ್ಟರ ಮಟ್ಟಿಗೆ ಬಡವಾಗಿದೆಯೇ? ಐಪಿಎಲ್​ ಬಿ ತಂಡಗಳಂತೆ ಎಲ್​ಪಿಎಲ್​ ತಂಡಗಳಿಗೆ ಹೆಸರಿಸಲಾಗಿದೆ ಎಂದೂ ಟೀಕಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net