ಜಿಂಬಾಬ್ವೆ ಸರಣಿ ಗೆಲುವಿನ ಬೆನ್ನಲ್ಲೇ ನಾಯಕತ್ವಕ್ಕೆ ಗಾಳ ಹಾಕಿದ್ರಾ ಶುಭಮನ್ ಗಿಲ್​? ಕೋಚ್​ 'ಗೌತಿ' ನಿರ್ಣಯವೇ ಅಂತ್ಯ

ವಿಜಯವಾಣಿ (23)
Published on

ನವದೆಹಲಿ: ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಐದು ಟಿ20 ಪಂದ್ಯಗಳ ಸರಣಿ​ ಕೈಗೊಂಡ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ, 4-1 ಅಂತರದಿಂದ ಸಿರೀಸ್​ ವಶಪಡಿಸಿಕೊಂಡಿತು. ತಂಡದ ಕ್ಯಾಪ್ಟನ್ ಆಗಿಯೂ ಓಪನಿಂಗ್ ಬ್ಯಾಟ್ಸ್​ಮನ್ ಆಗಿಯೂ ಅತ್ಯುತ್ತಮ ಪ್ರದರ್ಶನ ನೀಡಿದ ಗಿಲ್​, ತಮಗೆ ನೀಡಲಾದ ನಾಯಕತ್ವವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಟಿ20 ವಿಶ್ವಕಪ್​ ಗೆದ್ದ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿದ್ದರೂ ಕಣಕ್ಕಿಳಿಯದೆ ಹಿಂತಿರುಗಿದ ಗಿಲ್​, ಸರಣಿ ಗೆಲುವಿನ ಸಂತಸದಲ್ಲಿ ಕ್ಯಾಪ್ಟನ್​ ಸ್ಥಾನಕ್ಕೆ ನೂತನ ಕೋಚ್ ಗೌತಮ್ ಗಂಭೀರ್​ಗೆ ಪರೋಕ್ಷವಾಗಿ ಬೇಡಿಕೆ ಇಟ್ಟಿರುವಂತೆ ಕಾಣಿಸುತ್ತಿದೆ.

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ನಾಯಕನಾಗಿ ಹಾಗೂ ಬ್ಯಾಟರ್​ ಆಗಿ ಅದ್ಭುತ ಕೊಡುಗೆ ಕೊಟ್ಟ ಶುಭಮನ್ ಗಿಲ್​, ಟೀಮ್ ಇಂಡಿಯಾಗೆ ಕ್ಯಾಪ್ಟನ್ ಆಗುವ ಮೂಲಕ ತಮಗೆ ನೀಡಲಾದ ಸ್ಥಾನವನ್ನು ಮೈದಾನದಲ್ಲಿ ಖುಷಿಯಿಂದ ಅನುಭವಿಸಿದ್ದಾರೆ ಎಂಬುದು ಅವರ ಮಾತಿನಿಂದ ತಿಳಿದುಬಂದಿದೆ. ಇಟ್ಟ ಭರವಸೆ ಕೊಟ್ಟ ನಾಯಕತ್ವವನ್ನು ಸಮರ್ಥವಾಗಿ ಬಳಸಿಕೊಂಡ ಗಿಲ್​ ಬಗ್ಗೆ ವ್ಯಾಪಕ ಮೆಚ್ಚುಗೆಗಳು ಹರಿದುಬಂದಿದ್ದು, ಮುಂಬರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದದ್ಧ ವೈಟ್​ ಬಾಲ್​ ಸರಣಿಗಳಿಗೆ ಭಾರತ ತಂಡ ಎದುರುನೋಡುತ್ತಿದೆ. ಈ ತಂಡಕ್ಕೆ ಶುಭಮನ್ ಕ್ಯಾಪ್ಟನ್ ಆಗಿ ಮುಂದುವರೆಯುವ ಸಾಧ್ಯತೆಗಳಿವೆ.

"ಇದು ನಾನು ಖಂಡಿತ ಆನಂದಿಸುವ ವಿಷಯ. ತುಂಬ ಒತ್ತಡ ಇತ್ತು ಎಂದು ಹೇಳಿದರೆ ತಪ್ಪಾಗುತ್ತದೆ. ಆದ್ರೆ, ಒತ್ತಡ ಇದದ್ದು ನಿಜ. ಇದೊಂದು ಗೆಲುವಿನ ಮೋಜಿನ ಭಾಗ ಎಂದು ನಾನು ಭಾವಿಸುತ್ತೇನೆ. ರೋಹಿತ್ ಶರ್ಮ, ಎಂ.ಎಸ್. ಧೋನಿ, ವಿರಾಟ್ ಭಾಯ್, ಹಾರ್ದಿಕ್ ಪಾಂಡ್ಯ ಅವರೆಲ್ಲರಿಂದ ಹಲವು ವಿಚಾರಗಳನ್ನು ಅಳವಡಿಸಿಕೊಂಡಿದ್ದೇನೆ" ಎಂದರು.

"ಒಬ್ಬ ಬ್ಯಾಟ್ಸ್​ಮನ್​ಗಿಂತಲೂ ನನ್ನಲ್ಲಿ ನಾಯಕತ್ವ ಹೆಚ್ಚಿನ ಪರಿಣಾಮ ಬೀರಿದೆ. ನನ್ನಲ್ಲಿನ ಬೆಸ್ಟ್​ ಕ್ಯಾಪ್ಟನ್ ಆದಾಗ ಹೊರಬಂದಿದೆ" ಎಂದು ಗಿಲ್ ಹೇಳಿದ್ದಾರೆ. ಸದ್ಯ ಈ ಮಾತುಗಳು ನೇರವಾಗಿ ತಮ್ಮನ್ನು ಮುಂಬರುವ ಸರಣಿಗಳಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ಮುಂದುವರೆಸುವಂತೆ ನೂತನ ಕೋಚ್ ಗೌತಮ್ ಗಂಭೀರ್​ಗೆ ಮನವಿ ಮಾಡಿದಂತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net