

ನವದೆಹಲಿ: ಮುಂಬರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನವೇ ಇದೀಗ ಟೀಮ್ ಇಂಡಿಯಾದ ಉಪ ನಾಯಕ ಶುಭಮನ್ ಗಿಲ್ಗೆ ರೆಸ್ಟ್ ನೀಡಲಾಗಿದ್ದು, ಈ ಪಂದ್ಯದಿಂದ ಗಿಲ್ ಹೊರಗುಳಿಯಲಿದ್ದಾರೆ. ಅಕ್ಟೋಬರ್ 7ರಿಂದ ಪ್ರಾರಂಭವಾಗುವ ಟೆಸ್ಟ್ ಸರಣಿಗೆ ಶುಭಮನ್ರ ಉಪಸ್ಥಿತಿ ಬೇಡವೆಂದು ನಿರ್ಧರಿಸಿರುವ ಬಿಸಿಸಿಐ, ಸ್ಟಾರ್ ಆಟಗಾರನ ಹೊರೆಯನ್ನು ಇದೀಗ ಕಡಿತಗೊಳಿಸಿದೆ.
ಈ ಮಹತ್ವದ ನಿರ್ಧಾರ ಕೈಗೊಂಡಿರುವ ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಯು, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಮೂರನೇ ಬ್ಯಾಟರ್ ಆಗಿರುವ ಸ್ಟಾರ್ ಆಟಗಾರ ಶುಭಮನ್ ಗಿಲ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ಅವರೊಂದಿಗೆ 10 ಟೆಸ್ಟ್‌ಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ತಂಡದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಸದ್ಯ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಂಡಿರುವ ಬಿಸಿಸಿಐ, ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ಶುಭಮನ್ ಬೇಡ. ಇಲ್ಲಿಯೂ ಅವರು ಮೈದಾನಕ್ಕಿಳಿದರೆ ಹೊರೆ ಹೆಚ್ಚಾಗುತ್ತದೆ. ಹೀಗಾಗಿ ಗಿಲ್ ವಿಶ್ರಾಂತಿಯಲ್ಲಿರುವುದು ಸೂಕ್ತ ಎಂದು ತಿಳಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್‌ಗಳ ಸರಣಿ ಇರುವ ಕಾರಣ ತಮ್ಮ ತಂಡದ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿರುವ ಬಿಸಿಸಿಐ, ಇದೀಗ ಟೀಮ್ ಇಂಡಿಯಾದ ಸ್ಟಾರ್ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ರನ್ನು ಬಾಂಗ್ಲಾ ಟೆಸ್ಟ್ ಸರಣಿಯಿಂದ ಕೈಬಿಟ್ಟಿದೆ. ಇವರಿಬ್ಬರಿಗೂ ವಿಶ್ರಾಂತಿ ಕೊಟ್ಟಿದೆ. ಸದ್ಯ ಟಿ20 ಪಂದ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡದ ಮ್ಯಾನೇಜ್ಮೆಂಟ್, ವಿಶ್ವದ ಟೆಸ್ಟ್ ಚಾಂಪಿಯನ್ಶಿಪ್ನತ್ತ ದೊಡ್ಡ ಗುರಿಯನ್ನು ಹೊಂದಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ,(ಏಜೆನ್ಸೀಸ್).