

ನವದೆಹಲಿ: ಕರೊನಾ ವೈರಸ್ ಲಾಕ್‌ಡೌನ್ ಇಡೀ ಜಗತ್ತೇ ಆನ್‌ಲೈನ್ ಅವಲಂಬಿಸಿದೆ. ಈ ವೇಳೆ ಆನ್‌ಲೈನ್ ಪರಿಪಾಠ ಪೂರ್ಣ ಪ್ರಮಾಣದಲ್ಲಿ ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿತು. ಚೆಸ್, ಶೂಟಿಂಗ್, ಕೇರಂನಂಥ ಕ್ರೀಡೆಗಳಲ್ಲಿ ಆನ್‌ಲೈನ್ ಮೂಲಕವೇ ಸ್ಪರ್ಧೆ ಬಂದಿರುವುದು ಹೊಸದಲ್ಲ. ಇದೀಗ ಅಂತಾರಾಷ್ಟ್ರೀಯ ಆನ್‌ಲೈನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಿಂದ ಉತ್ತೇಜನಗೊಂಡಿರುವ ಆಯೋಜಕರು, ಅಗ್ರ ಶೂಟರ್‌ಗಳು ಒಳಗೊಂಡಂತೆ ಆನ್‌ಲೈನ್ ಲೀಗ್ ಆರಂಭಿಸಲು ಯೋಜನೆ ರೂಪಿಸಿದ್ದಾರೆ. ‘ರೇಸ್ ಟು 10’ ಹೆಸರಿನಲ್ಲಿ ಲೀಗ್ ಆರಂಭಗೊಳ್ಳಲಿದೆ.
ಇದನ್ನೂ ಓದಿ: ಪತ್ನಿಗೆ ಪಾಂಡ್ಯ ಗಿಫ್ಟ್ ಕೊಟ್ಟ ಬ್ಯಾಗ್ ಬೆಲೆ ಗೊತ್ತೇ?
ಭಾರತ ಕ್ರೀಡಾ ಲೀಗ್‌ಗಳ ತವರೂರು. ಈಗಾಗಲೇ ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್, ಕುಸ್ತಿ ಜನಪ್ರಿಯಗೊಂಡಿವೆ. ಇದೀಗ ಒಲಿಂಪಿಕ್ ಕ್ರೀಡೆಗೆ ಆನ್‌ಲೈನ್ ಮೂಲಕ ಲೀಗ್ ಆರಂಭಿಸಲಾಗುತ್ತಿದೆ. ಭಾರತದ ಮಾಜಿ ಶೂಟರ್ ಶಿಮೊಜ್ ಷರಿಫ್ ಅವರು ಅಂದುಕೊಂಡಂತೆ ಯೋಜನೆಗಳು ಕೈಗೂಡಿದರೆ, ಶೀಘ್ರವೇ ಆನ್‌ಲೈನ್ ಶೂಟಿಂಗ್ ಚಾಂಪಿಯನ್‌ಷಿಪ್ ಆರಂಭಗೊಳ್ಳಲಿದೆ. ಕೇವಲ ಭಾರತದ ಶೂಟರ್‌ಗಳಿಗೆ ಮಾತ್ರವಲ್ಲದೇ ವಿಶ್ವದ ಸ್ಟಾರ್ ಶೂಟರ್‌ಗಳು ಲೀಗ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಈಗಾಗಲೇ ಅಸ್ಟ್ರೀಯಾ, ಫ್ರಾನ್ಸ್, ಇಂಗ್ಲೆಂಡ್ ಶೂಟರ್‌ಗಳು ಲೀಗ್‌ನಲ್ಲಿ ಭಾಗವಹಿಸಲು ಆಸಕ್ತಿ ತೋರಿದ್ದಾರೆ ಎಂದು ಹೇಳುತ್ತಾರೆ ಶಿಮೊಜ್. ಪ್ರತಿ ತಂಡದಲ್ಲಿ ಕೇವಲ ಇಬ್ಬರು ವಿದೇಶಿ ಶೂಟರ್‌ಗಳಿಗಷ್ಟೇ ಅವಕಾಶವಿರುತ್ತದೆ.
ಮೊದಲ ಲೀಗ್‌ನಲ್ಲಿ 6-8 ತಂಡಗಳಿಗಷ್ಟೇ ಅವಕಾಶವಿರಲಿದೆ. ರೈಲ್ ಹಾಗೂ ಪಿಸ್ತೂಲ್ ವಿಭಾಗದಲ್ಲಿ ಲೀಗ್ ನಡೆಯಲಿದೆ. ವಾರಾಂತ್ಯದಲ್ಲಿ ತಿಂಗಳು ಪೂರ್ತಿ ಲೀಗ್ ನಡೆಯಲಿದ್ದು, ಪ್ರತಿ ತಂಡದಲ್ಲಿ ತಲಾ ಎರಡು ಪಿಸ್ತೂಲ್, ರೈಲ್ ಸೇರಿದಂತೆ ನಾಲ್ಕು ಶೂಟರ್‌ಗಳು ಇರಲಿದ್ದಾರೆ. ಮೊದಲು 10 ಅಂಕ ಗಳಿಸಿದ ತಂಡ ಗೆಲುವು ಸಾಧಿಸಲಿದೆ. ಅಗ್ರ ಎರಡು ಸ್ಥಾನ ಪಡೆದ ತಂಡಗಳು ಫೈನಲ್‌ನಲ್ಲಿ ಸೆಣಲಿವೆ. ಲಾಕ್‌ಡೌನ್ ವೇಳೆ ನಾಲ್ಕು ಆನ್‌ಲೈನ್ ಚಾಂಪಿಯನ್‌ಷಿಪ್ ನಡೆಯಲಿವೆ.