ಪತ್ನಿಗೆ ಪಾಂಡ್ಯ ಗಿಫ್ಟ್​ ಕೊಟ್ಟ ಬ್ಯಾಗ್ ಬೆಲೆ ಗೊತ್ತೇ?

pandya_web-1
Published on

ಬೆಂಗಳೂರು: ಲಾಕ್‌ಡೌನ್ ನಡುವೆ ಕ್ರಿಕೆಟ್ ಚಟುವಟಿಕೆಗಳೆಲ್ಲಾ ಸ್ಥಗಿತಗೊಂಡಿದ್ದರೂ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜೀವನಚಕ್ರ ವೇಗವಾಗಿಯೇ ಓಡುತ್ತಿದೆ. ಸದ್ದಿಲ್ಲದೆ ಮದುವೆ, ಮಗು ಮಾಡಿಕೊಂಡು ಅಚ್ಚರಿ ನೀಡಿರುವ ಪಾಂಡ್ಯ, ಪತ್ನಿ ನತಾಶಾ ಸ್ಟಾಂಕೋವಿಕ್‌ಗೆ ದುಬಾರಿ ಬ್ಯಾಗ್ ಒಂದನ್ನು ಉಡುಗೊರೆ ನೀಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ವರ್ಷಾರಂಭದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪಾಂಡ್ಯ, ನತಾಶಾ ಗರ್ಭಿಣಿಯಾಗಿರುವುದನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಇದೇ ವೇಳೆ ನತಾಶಾ ಜತೆಗಿರುವ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಪೈಕಿ ಒಂದು ಚಿತ್ರದಲ್ಲಿ ನತಾಶಾ ಹೆಗಲಿಗೆ ಹಾಕಿಕೊಂಡಿದ್ದ ದುಬಾರಿ ಲೇಡೀಸ್ ಬ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದೆ. ಕಪ್ಪು ಮತ್ತು ಚಿನ್ನದ ಬಣ್ಣದ ಆ ಬ್ಯಾಗ್ ಅನ್ನು ಹಾರ್ದಿಕ್ ಪಾಂಡ್ಯ ಗಿಫ್ಟ್​ ನೀಡಿರಬಹುದು ಎಂದೂ ಊಹಿಸಲಾಗುತ್ತಿದೆ.

ಇಟಲಿ ಮೂಲದ ಲಕ್ಸುರಿ ಫ್ಯಾಷನ್​ ಕಂಪನಿ ‘ಲವ್ ಮೊಶಿನೋ’ ಬ್ರ್ಯಾಂಡ್‌ನ ಆ ಬ್ಯಾಗ್‌ನ ಅಂದಾಜು ಬೆಲೆ 25 ಸಾವಿರ ರೂ. ಆಗಿದ್ದು, ಅದಕ್ಕೆ ತೆರಿಗೆ ಮೊತ್ತ ಹೆಚ್ಚುವರಿಯಾಗಿರುತ್ತದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net