

Shikhar Dhawan: ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ರೂಪಿಸುವಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಭಾರತದ ಮಾಜಿ ಆಟಗಾರ ಶಿಖರ್ ಧವನ್ ಹೇಳಿದ್ದಾರೆ.
ಲಂಡನ್‌ನಲ್ಲಿ ನಡೆದ 'ಬಿಯಾಂಡ್ ದಿ ಬೌಂಡರೀಸ್' ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಧವನ್ "ಧೋನಿ ಭಾಯ್ ನನಗೆ ತುಂಬಾ ಬೆಂಬಲ ನೀಡಿದರು ಎಂದು ನಾನು ಭಾವಿಸುತ್ತೇನೆ. ನನ್ನ ವೃತ್ತಿಜೀವನದ ಆರಂಭದಲ್ಲಿ, ಅವರು ನನ್ನ ಮೇಲೆ ಇಟ್ಟ ನಂಬಿಕೆ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಿತು. ಒಬ್ಬ ನಾಯಕ ಈ ರೀತಿಯ ನಂಬಿಕೆಯನ್ನು ತೋರಿಸಿದಾಗ, ಅದು ನಿಜವಾಗಿಯೂ ನೀವು ಬೆಳೆಯಲು ಮತ್ತು ದೀರ್ಘವಾಗಿ ಆಡಲು ಸಹಾಯ ಮಾಡುತ್ತದೆ" ಎಂದು ಹೇಳಿದ್ದಾರೆ.
ಅಲ್ಲದೇ, ಧೋನಿ ನಂತರ ನಾಯಕತ್ವ ವಹಿಸಿಕೊಂಡ ವಿರಾಟ್ ಮತ್ತು ರೋಹಿತ್ ನನಗೆ ಬೆಂಬಲವಾಗಿ ನಿಂತಿದ್ದರು. ಆದರೆ, ಆರಂಭಿಕ ಹಂತದಲ್ಲಿ ಧೋನಿ ಭಾಯ್ ಅವರ ಬೆಂಬಲ ವಿಶೇಷವಾಗಿತ್ತು ಎಂದು ತಿಳಿಸಿದರು.
2010ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಧವನ್, 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ಶತಕದೊಂದಿಗೆ ಆರಂಭಿಸಿದರು. ಕೇವಲ 85 ಎಸೆತಗಳಲ್ಲಿ ಅತಿ ವೇಗದ ಶತಕ ಗಳಿಸುವ ಮೂಲಕ ಅವರು ಧೋನಿ ನಾಯಕತ್ವದಲ್ಲಿ ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಧವನ್ ಪ್ರಮುಖ ಪಾತ್ರ ವಹಿಸಿದ್ದರು.
ಶಿಖರ್ ಧವನ್ 2024ರ ಆಗಸ್ಟ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದರು. ಶಿಖರ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 34 ಟೆಸ್ಟ್, 167 ಏಕದಿನ ಮತ್ತು 68 ಟಿ-20 ಗಳನ್ನು ಆಡಿದ್ದು, ಮೂರು ಸ್ವರೂಪಗಳಲ್ಲಿ ಕ್ರಮವಾಗಿ 2,315 ರನ್, 6,793 ಮತ್ತು 1,579 ರನ್ ಕಲೆ ಹಾಕಿದ್ದಾರೆ.(ಏಜೆನ್ಸೀಸ್)