

Rishabh Pant: ಬಲಗಾಲು ಹೆಬ್ಬೆರಳಿನ ಮೂಳೆ ಮುರಿತದಿಂದ ಬಳಲುತ್ತಿರುವ ವಿಕೆಟ್ ಕೀಪರ್ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ ಉಳಿದ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಜೀವನದ ಅನುಭವವೇ ಬದುಕಿನ ಯಶಸ್ಸು
68ನೇ ಓವರ್ನಲ್ಲಿ ಕ್ರಿಸ್ ವೋಕ್ಸ್ ಬೌಲಿಂಗ್ ಮಾಡುವ ವೇಳೆ ರಿವರ್ಸ್ ಸ್ವೀಪ್ ಮಾಡಲು ಯತ್ನಿಸುವಾಗ, ಬ್ಯಾಟಿನ ಅಂಚಿಗೆ ತಗುಲಿದ ಚೆಂಡು ಪಂತ್ ಕಾಲಿನ ಬಲಗಾಲಿನ ಬೆರಳಿಗೆ ಬಲವಾಗಿ ಅಪ್ಪಳಿಸಿದ ಹಿನ್ನೆಲೆ ಬಲವಾದ ಪೆಟ್ಟು ಬಿದಿದ್ದೆ. ಇದೀಗ ವಿಶ್ರಾಂತಿ ಪಡೆಯಲು ಈಗಾಗಲೇ ವೈದ್ಯರು ಸಲಹೆ ನೀಡಿದ್ದು, ಸದ್ಯಕ್ಕೆ ಬಿಸಿಸಿಐ ವೈದ್ಯಕೀಯ ತಂಡ ಅವರ ಆರೋಗ್ಯದ ಕುರಿತು ಗಮನ ಹರಿಸುತ್ತಿದೆ.
ಪ್ರಸ್ತುತ ನಡೆಯುತ್ತಿರುವ 4ನೇ ಟೆಸ್ಟ್ನ ಉಳಿದ ಅವಧಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಕರ್ತವ್ಯಗಳನ್ನು ವಹಿಸಿಕೊಳ್ಳಲಿದ್ದಾರೆ. ಆಂಡರ್ಸ್ನ್-ತೆಂಡೂಲ್ಕರ್ ಸರಣಿ ಗೆಲ್ಲಲು ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಈ ಗಾಯ ದೊಡ್ಡ ಆಘಾತವನ್ನು ನೀಡಿದೆ.
ಈ ಸರಣಿಯಲ್ಲಿ ಪಂತ್ಗೆ ಇದು ಎರಡನೇ ಗಾಯವಾಗಿದ್ದು, ಇದಕ್ಕೂ ಮೊದಲು ಲಾರ್ಡ್ಸ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೀಪಿಂಗ್ ಮಾಡುವಾಗ ಪಂತ್ ಬೆರಳಿಗೆ ಗಾಯವಾಗಿತ್ತು, ಇದರಿಂದಾಗಿ ಇಂಗ್ಲೆಂಡ್ನ ಎರಡನೇ ಇನ್ನಿಂಗ್ಸ್ನಲ್ಲಿ ಬದಲಿ ಆಟಗಾರ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದರು. ಪಂತ್ ಗಾಯ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಉಳಿದಿರುವ ಪಂದ್ಯಗಳಿಗೆ ಅವರ ಅನುಪಸ್ಥಿತಿ ಪ್ರವಾಸಿ ತಂಡದ ಮಧ್ಯಮ ಕ್ರಮಾಂಕದ ಮೇಲೆ ಪರಿಣಾಮ ಬೀರಲಿದೆ.
ಈ ಬೆಳವಣಿಗೆಗಳಿಂದಾಗಿ ಮುಂಬರುವ ಏಷ್ಯಾ ಕಪ್ ಸಿದ್ಧತೆಗಳು ಮತ್ತು ತವರಿನ ಸರಣಿಯ ಕಾರ್ಯಯೋಜನೆಗಳ ಬಗ್ಗೆ ಕಳವಳ ವ್ಯಕ್ತವಾಗಿದೆ.(ಏಜೆನ್ಸೀಸ್)