ನೀನೆಂದಿಗೂ ನನ್ನ ಜತೆಯಲ್ಲೇ ಇರ್ತೀಯಾ ಮಗನೇ; ಭಾವುಕರಾದ ಶಿಖರ್ ಧವನ್​ಗೆ ಫ್ಯಾನ್ಸ್​ ಆಸರೆ

WhatsApp Image 2024-04-17 at 7.28.29 PM
Published on

ಪಂಜಾಬ್: ತಮ್ಮ ಪ್ರೀತಿಯ ಮಗನನ್ನು ಜೊರಾವರ್ ಅವರನ್ನು ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶಿಖರ್ ಧವನ್​ ಮಿಸ್ ಮಾಡಿಕೊಳ್ಳುತ್ತಿದ್ದು, ಈ ಕುರಿತು ಮಗನ ಹೆಸರಿನಲ್ಲಿರುವ ಪಂಜಾಬ್ ಕಿಂಗ್ಸ್​​ ಟೀಮ್​ನ ಜರ್ಸಿಯನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ತಮ್ಮ ಫ್ರಾಂಚೈಸಿಯ ಜರ್ಸಿಯನ್ನು ಬಹಿರಂಗಪಡಿಸಿದ್ದು, ಅದನ್ನು ಧರಿಸಿ ಪ್ರದರ್ಶಿಸಿದ್ದಾರೆ. ಪುತ್ರ ಜೋರಾವರ್ ಅವರ ಹೆಸರಿನಲ್ಲಿ ಜೆರ್ಸಿ ತಯಾರಾಗಿದ್ದು, ಇದೇ ಟಿ-ಶರ್ಟ್​ನ ಧರಿಸಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಧವನ್ ಅವರ ಮಾಜಿ ಪತ್ನಿ ಏಶಾ ಮುಖರ್ಜಿ, ಪುತ್ರನನ್ನು ಧವನ್​ರಿಂದ ದೂರವಿಟ್ಟಿದ್ದರು. ಈ ಬಗ್ಗೆ ಶಿಖರ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು.

ದೆಹಲಿ ಮೂಲದ ಕ್ರಿಕೆಟಿಗರಾದ ಶಿಖರ್​ ತಮ್ಮ ಮಗನನ್ನು ಶೀಘ್ರದಲ್ಲೇ ಭೇಟಿಯಾಗುವ ಬಯಕೆಯನ್ನು ಸಹ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಧವನ್ ಒಂದು ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ 5 ತಿಂಗಳಿಂದ ನಾನು ನನ್ನ ಮಗನನ್ನು ಭೇಟಿಯೇ ಆಗಿಲ್ಲ ಎಂಬ ಶಾಕಿಂಗ್ ಹೇಳಿಕೆ ನೀಡಿದರು. ನನಗೆ ನೋವಾಗಲಿಲ್ಲ. ನಾನು ನನ್ನ ಆಲೋಚನೆಗಳನ್ನು ವ್ಯಕ್ತಪಡಿಸುತ್ತಿದ್ದೆ. ನಾನು ಅವನೊಂದಿಗೆ ಮಾತನಾಡಿ ಐದು ತಿಂಗಳೇ ಕಳೆದಿದೆ ಎಂದರು.

"ನಾನೊಬ್ಬ ಭಾವನಾತ್ಮಕ ವ್ಯಕ್ತಿ ಆದ ಕಾರಣ, ಆಗಾಗ್ಗೆ ಅವನಿಗೆ ಪ್ರೀತಿಯನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದೆ. ಏಕೆಂದರೆ, ಅವನ ಬಗ್ಗೆ ಯೋಚನೆ ಬಂದಾಗಲೆಲ್ಲಾ ನಾನು ಭಾವುಕನಾಗ್ತಿದ್ದೆ. ಈ ಡಿಜಿಟಲ್ ಯುಗದಲ್ಲಿ ನನ್ನ ಮಗ ನಾನು ಹಾಕುವ ಪೋಸ್ಟ್ ಅನ್ನು ಓದಬಹುದು ಎಂಬ ಭರವಸೆಯೊಂದಿಗೆ ಇದನ್ನೆಲ್ಲಾ ಬರೆಯುತ್ತಿದ್ದೇನೆ" ಎಂದು ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net