

Dhawan Dating:ಇದೇ ಫೆ.20ರಂದು ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಭಾರತ-ಬಾಂಗ್ಲದೇಶ ಪಂದ್ಯದ ವೇಳೆ ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ಧವನ್ ಪೆವಿಲಿಯನ್ನಲ್ಲಿ ಯುವತಿಯೊಂದಿಗೆ ಪಂದ್ಯ ವಿಕ್ಷಣೆ ಮಾಡುತ್ತಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು Ctrl C Ctrl Mems ಪೇಜ್ನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ.
ಈ ಹಿನ್ನೆಲೆ ಶಿಖರ್ ಧವನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆಯೇ? ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಕಾಡುತ್ತಿದೆ. ಹೌದು, ಚಾಂಪಿಯನ್ಸ್ ಟ್ರೋಫಿಯ ಬ್ರಾಂಡ್ ರಾಯಭಾರಿ ಧವನ್ ವಿದೇಶಿ ಮಹಿಳೆ ಕೂಡ ಅವನೊಂದಿಗೆ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದಳು. ಈ ಮಹಿಳೆ ಯಾರು ಎಂದು ಅಭಿಮಾನಿಗಳಲ್ಲಿ ಚರ್ಚೆ ತೀವ್ರಗೊಂಡಿದೆ. ಕೆಲವು ಸಮಯದ ಹಿಂದೆ ವಿಚ್ಛೇದನ ಪಡೆದ ಶಿಖರ್ ಧವನ್ ಮತ್ತೊಮ್ಮೆ ವಿದೇಶಿ ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್ಸ್ ಚರ್ಚಿಸುತ್ತಿದ್ದಾರೆ.
ಧವನ್ ವಿಚ್ಛೇದನ ಪಡೆದಿರುವುದರಿಂದ ಜನರಲ್ಲಿ ಈ ಪ್ರಶ್ನೆ ಮರು ಉದ್ಭವಿಸುತ್ತಿದೆ. ಶಿಖರ್ ಧವನ್ ಈ ಮುಂಚೆ ವಿಮಾನ ನಿಲ್ದಾಣದಲ್ಲಿ ವಿದೇಶಿ ಮಹಿಳೆಯೊಂದಿಗೆ ಕಾಣಿಸಿಕೊಂಡಿದ್ದರು. ಬಳಿಕ ಇದೀಗ, ಭಾರತ vs ಬಾಂಗ್ಲಾದೇಶ ಪಂದ್ಯದಲ್ಲಿ ಮತ್ತೆ ವಿದೇಶಿ ಮಹಿಳೆಯೊಂದಿಗೆ ಕುಳಿತು ಪಂದ್ಯವನ್ನು ಆನಂದಿಸುತ್ತಿರುವುದು ಕಂಡುಬಂದಿದೆ.
ಇನ್ನು ಆ ಮಹಿಳೆ ಸೋಫಿ ಎಂದು ವರದಿಯಾಗಿದ್ದು, ಶಿಖರ್ ಧವನ್ ಕೂಡ ಇನ್ಸ್ಟಾಗ್ರಾಂನಲ್ಲಿ ಅವರನ್ನು ಫಾಲೋ ಮಾಡುತ್ತಾರೆ. ಇಬ್ಬರ ನಡುವೆ ಸ್ನೇಹ ಇರುವುದು ಸ್ಪಷ್ಟ. ಆದಾಗ್ಯೂ, ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆಯೇ ಅಥವಾ ಸ್ನೇಹಿತರಾಗಿ ಪಂದ್ಯವನ್ನು ವೀಕ್ಷಿಸಲು ಒಟ್ಟಿಗೆ ಬಂದಿದ್ದಾರೆಯೇ ಎಂದು ಹೇಳಲಾಗುವುದಿಲ್ಲ.
ಶಿಖರ್ ಧವನ್ 2012 ರಲ್ಲಿ ತಮಗಿಂತ ಹಿರಿಯರಾದ ಆಯೇಷಾ ಮುಖರ್ಜಿ ಅವರನ್ನು ವಿವಾಹವಾದರು. ಅವರಿಬ್ಬರಿಗೂ ಒಬ್ಬ ಮಗನೂ ಇದ್ದಾನೆ. ಕೆಲ ವರ್ಷಗಳಿಂದೆ ಹಿಂದೆ, ಶಿಖರ್ ಧವನ್ ಮತ್ತು ಆಯೇಷಾ ಬೇರ್ಪಟ್ಟು ವಿಚ್ಛೇದನ ಪಡೆದರು. (ಏಜೆನ್ಸೀಸ್)